ಹೀರೆಕಾಯಿ ಚಟ್ನಿ ಮಾಡುವ ವಿಧಾ

೨ ಚಮಚ ಎಣ್ಣೆ ೧ ಚಮಚ ಉದ್ದಿನ ಬೇಳೆ
೧ ಚಮಚ ಕಡ್ಲೆ ಬೇಳೆ ೪ ಒಣ ಕೆಂಪು ಮೆಣಸಿನಕಾಯಿ
೧ ಕಪ್ ತೆಂಗಿನತುರಿ ಸಣ್ಣ ತುಂಡು ಹುಣಸೆಹಣ್ಣು
೧ ಟೀ ಸ್ಪೂನ್ ಬೆಲ್ಲ ಅರ್ಧಟೀ ಸ್ಪೂನ್ ಉಪ್ಪು
ಒಗ್ಗರಣೆಗಾಗಿ:
೨ ಟೀ ಸ್ಪೂನ್ ಎಣ್ಣೆ ಅರ್ಧ ಟೀ ಸ್ಪೂನ್ ಸಾಸಿವೆ
ಅರ್ಧ ಟೀ ಸ್ಪೂನ್ ಉದ್ದಿನ ಬೇಳೆ ೧ ಒಣ ಕೆಂಪು ಮೆಣಸಿನಕಾಯಿ
ಕರಿಬೇವಿನ ಎಲೆಗಳು
ಮೊದಲನೆಯದಾಗಿ, ಪ್ಯಾನ್‌ನಲ್ಲಿ ೨ ಟೇಬಲ್ ಸ್ಪೂನ್ ಎಣ್ಣೆಯನ್ನು
ಬಿಸಿ ಮಾಡಿ ೧ಟೇಬಲ್ ಸ್ಪೂನ್ ಉದ್ದಿನ ಬೇಳೆ, ೧ ಟೇಬಲ್ ಸ್ಪೂನ್
ಕಡ್ಲೆ ಬೇಳೆ, ೪ ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ. ಬೇಳೆಗಳು
ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
ಹೀರೆಕಾಯಿ ಸಿಪ್ಪೆಯನ್ನು ಸೇರಿಸಿ ಹುರಿಯಿರಿ. ಸಂಪೂರ್ಣವಾಗಿ
ತಣ್ಣಗಾಗಿಸಿ ಬ್ಲೆಂಡರ್ ಗೆ ವರ್ಗಾಯಿಸಿ. ೧ ಕಪ್ ತೆಂಗಿನಕಾಯಿ, ಸಣ್ಣ
ತುಂಡು ಹುಣಸೆಹಣ್ಣು, ೧ ಟೀ ಸ್ಪೂನ್ ಬೆಲ್ಲ, ಅರ್ಧ ಟೀ ಸ್ಪೂನ್
ಉಪ್ಪು ಮತ್ತು ಅರ್ಧ ಕಪ್ ನೀರು ಸೇರಿಸಿ. ಅಗತ್ಯವಿರುವಂತೆ
ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ೨ ಟೀ ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಒಗ್ಗರಣೆ
ತಯಾರಿಸಿ. ಅರ್ಧ ಟೀ ಸ್ಪೂನ್ ಸಾಸಿವೆ, ಅರ್ಧ ಟೀ ಸ್ಪೂನ್
ಉದ್ದಿನ ಬೇಳೆ, ೧ ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು
ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆಯನ್ನು ತಯಾರಿ ಮಾಡಿ.
ಹೀರೆಕಾಯಿ ಚಟ್ನಿ ಬಿಸಿ ಅನ್ನದೊಂದಿಗೆ ಬೆರೆಸಿ ಆನಂದಿಸಿ.