ಹೀರೆಕಾಯಿ ಔಷಧೀಯ ಲಾಭ

ಹೀರೆಕಾಯಿಯಲ್ಲಿ ವಿಟಮಿನ್ ‘ ಎ ‘ ಅಂಶ ಗಣನೀಯ ಪ್ರಮಾಣದಲ್ಲಿ
ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು
ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ. ಮುಖ್ಯವಾಗಿ ವಯಸ್ಸಾದವರಲ್ಲಿ
ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ
ಬೀಟಾ – ಕ್ಯಾರೋಟಿನ್ ಎಂಬ ವಿಟಮಿನ್ ‘ ಎ ‘ ಅಂಶದ ರೂಪ
ಸರಿಪಡಿಸುತ್ತದೆ. ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು
ಹೀರೆಕಾಯಿಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ.
ಹೀರೆಕಾಯಿ ಒಂದು ಆಂಟಿ – ಆಕ್ಸಿಡೆಂಟ್ ಕೂಡ ಆಗಿದ್ದು,
ಇದರಲ್ಲಿರುವ ಬೀಟಾ – ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು
ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ
ವಿ?ಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು
ಫ್ರೀ ರಾಡಿಕಲ್‌ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.
ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ. ಹಾಗಾಗಿ ನಿಮ್ಮ
ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು
ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ
ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ
ಕೊರತೆಯನ್ನು ನೀಗಿಸುತ್ತದೆ.
ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ‘ ಬಿ೬ ‘ ಅಂಶ
ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ
ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ
ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು
ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು
ದೂರ ಮಾಡುತ್ತದೆ.