ಹೀರಾ: ಗ್ರಾ.ಪಂ ಅಧ್ಯಕ್ಷ- ಸದಸ್ಯರಿಂದ ಬೀಗಹಾಕಿ ಪ್ರತಿಭಟನೆ

ಸಿರವಾರ,ನ.೨೫- ಗ್ರಾಮ ಪಂಚಾಯತ್ ೧೫ನೇ ಹಣಕಾಸಿನಲ್ಲಿ ೩೦ಲಕ್ಷ ರೂಪಾಯಿ ಭ್ರಷ್ಟಾಚಾರವಾಗಿದೆ ಪಿಡಿಓ ಪ್ರಭುಕುಮಾರ ಲೆಕ್ಕಪತ್ರ ನೀಡಿಲ್ಲಾ, ಅಭಿವೃದ್ಧಿ ಕಾಮಗಾರಿ ಮಾಡದೆ, ಅಧ್ಯಕ್ಷರಿಗೆ ಸದಸ್ಯರ ಗಮನಕ್ಕೆ ಬಾರದೆ ಸುಮಾರು ೩೦ಲಕ್ಷ ರೂಪಾಯಿ ಭ್ರಷ್ಟಾಚಾರವಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ಹಾಗೂ ಸದಸ್ಯರು ಸೇರಿಕೊಂಡು ಗ್ರಾ.ಪಂ.ಕಾರ್ಯಲಯಕ್ಕೆ ಬೀಗಹಾಕಿ ಪ್ರತಿಭಟನೆ ಮಾಡಿದ ಘಟನೆ ಗುರುವಾರ ಜರುಗಿದೆ.
ಪಿಡಿಓ ಪ್ರಭುಕುಮಾರ ಗ್ರಾ.ಪಂ. ಅಮಾನತ್ ಮಾಡಬೇಕು ಎಂದು ಸದಸ್ಯರು ಪಟ್ಟುಹಿದರು, ಗ್ರಾ.ಪಂ.ಬಂದ ಸರಕಾರದ ಯೋಜನೆಯನ್ನು ಸದಸ್ಯರಿಗೆ ಮಾಹಿತಿ ನೀಡಿಲ್ಲಾ, ಸಾಮಾನ್ಯ ಸಭೆಮಾಡಿಲ್ಲಾ, ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲಾ, ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಲ್ಲಿ ಜನರಿಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪಾ, ಚಂರಡಿ ಹುಳುತೆಗೆಯುವದು, ಸ್ವಚ್ಚತಾ ಕಾರ್ಯ , ಉದ್ಯೋಗ ಖಾತ್ರಿ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ, ಸಾರ್ವಜನಿಕರು ಸದಸ್ಯರಿಗೆ ಹಿಡಿಶಾಪ ಹಾಕುತ್ತಾರೆ, ಅಧ್ಯಕ್ಷರು- ಉಪಾಧ್ಯಕ್ಷರ, ಸರ್ವ ಸದಸ್ಯರ ಒಪ್ಪಿ ಕೈಗೊಂಡರು ಡಾಟಾ ಆಪರೇಟರ್ ಅವರನ್ನು ವಜಾಮಾಡಿ ಹಲವಾರು ತಿಂಗಳು ಕಳೆದರು, ಜಿ.ಪಂ. ಹಾಗೂ ತಾ.ಪಂ.ಗೆ ಕಳಿಸಿಲ್ಲ, ಹೊಸ ಡಾಟಾ ಆಪರೇಟರ್ ನೇಮಕಾತಿ ಮಾಡುತ್ತಿಲ್ಲ ಎಂದು ಪಿಡಿಓ ಪ್ರಭುಕುಮಾರ ಅವರನ್ನು ಗ್ರಾ.ಪಂ.ಒಳಗೆ ಬಿಡಿದೆ ನೀನು ನಮ್ಮ ಗ್ರಾ.ಪಂ.ಗೆ ಬೇಡ ಎಂದು ಹೊರ ಹಾಕಿದರು. ತಾ.ಪಂ.ಇಓ ದೂರವಾಣಿ ಮೂಲಕ ಮಾಹಿತಿ ಪಡೆದು ಸದಸ್ಯರ ಮನವಲಿಸಿ ಶುಕ್ರವಾರ ಗ್ರಾ.ಪಂ.ಗೆ ಭೇಟಿ ನೀಡಿ, ಹೊಸ ಪಿಡಿಓ ಅವರನ್ನು ನೇಮಿಸಲಾಗುವದು ಎಂದು ಭರವಸೆಯ ನಂತರ ಸದಸ್ಯರು ತೆರಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಅಯ್ಯಪ್ಪ ದೊರೆ, ಶರಣಬಸವ, ಪಾರ್ವತೆಮ್ಮ,ಚನ್ನಬಸವ, ಬಸ್ಸಪ್ಪ, ಅಮರೇಶ, ಅಶೋಕ ಕಲ್ಲಂಗೇರಾ, ರಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.