ಹೀಡುಗಾಯಿ ಒಡೆದು ಹರಕೆ ತೀರಿಸಿದ ಕಾಂಗ್ರೆಸ್ ಮುಖಂಡರು.

ದಾವಣಗೆರೆ.ಜೂ.೧೦; ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರ ಗೆಲುವಿಗಾಗಿ ಚನ್ನಗಿರಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಆಂಜನೇಯಸ್ವಾಮಿಗೆ ೧೦೧ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.ಮಲ್ಲಿಗೆನಹಳ್ಳಿ ಗ್ರಾಮದ ತಾಲೂಕು ಪಂಚಾಯಿತಿ ಪರಾಜಿತ ಅಭ್ಯರ್ಥಿ ಟಿ.ಆರ್.ರಮೇಶ್ , ಶಾಸಕ ಕೆ.ಎಸ್.ಬಸವಂತಪ್ಪ ಗೆಲುವು ಸಾಧಿಸಿದರೆ, ೧೦೧ ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದರು. ಅವರು ದೇವರಲ್ಲಿ ಪ್ರಾರ್ಥಿಸಿದಂತೆ ಕೆ.ಎಸ್.ಬಸವಂತಪ್ಪ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಟಿ.ಆರ್. ರಮೇಶ್ ಮತ್ತು ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರಿಗೆ ೧೦೧ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.ಈ ಸಂದರ್ಭದಲ್ಲಿ ಟಿ.ಆರ್.ರಮೇಶ್, ಹನುಮಂತಪ್ಪ, ತಿಪ್ಪೇಶಿ, ಹಾಲೇಶ್, ಸುರೇಶ್, ಬಸವರಾಜ್, ಲೋಕೇಶ್, ಹನುಮಂತ, ರುದ್ರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.