ಕಲಬುರಗಿ,ಜು 1: ಇವರು ನಿಲೇಶ್ ಪ್ರಹ್ಲಾದ್ ನಿರ್ವಾಣೆ. ಮಹಾರಾಷ್ಟ್ರದ ಪುಣೆ ಮಹಾನಗರದ ನಿವಾಸಿ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ. ಅವರು ಸ್ವತಃ ಒಂದು ಪಾದರಕ್ಷೆ ಅಂಗಡಿಯ ಮಾಲೀಕ .
ಪ್ರತಿವರ್ಷ ಆಷಾಢ ಏಕಾದಶಿ ಸಂದರ್ಭದಲ್ಲಿ ಪಂಢÀರಾಪುರದತ್ತ ಸಾಗುವ ವಾರಕರಿ ಯಾತ್ರೆಯ ಮಾರ್ಗದ ಪಕ್ಕದಲ್ಲಿ ಕುಳಿತು ಒಂದು ವಿಶಿಷ್ಟ ಸೇವೆ ಸಲ್ಲಿಸುತ್ತಾರೆ .
ಯಾತ್ರೆಯಲ್ಲಿ ಲಕ್ಷಾಂತರ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ . ನೀಲೇಶ್ ಯಾತ್ರಿಗಳ ಹರಿದ ಚಪ್ಪಲಿ , ಬೂಟುಗಳನ್ನು ಉಚಿತವಾಗಿ ಹೊಲಿದು ಕೊಡುತ್ತಾರೆ .
ಬದುಕಿನ ಸಾಕ್ಷಾತ್ಕಾರಕ್ಕೆ ಹಲವು ದಾರಿ !
-ಜಿಕೆಪಿ.ಯಾದಗಿರಿ