ಹೀಗೆ ಎಲ್ಲಾ ಶಾಸಕರೂ  ಮಾಡಿದರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜೂ 19 : ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಬಗ್ಗೆ
ವಿಜಯನಗರ ಜಿಲ್ಲೆ  ಹಗರಿಬೊಮ್ಮಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ ನಾಯ್ಕ ಅವರಂತೆ ಎಲ್ಲಾ ಶಾಸಕರು ಮಾಡಿದರೆ ಒಳಿತು ಎಂಬ ಅಭಿಪ್ರಾಯ ಜನರದ್ದಾಗಿದೆ.
ಈ ಮೊದಲು 2008 ರಲ್ಲಿ  ಶಾಸಕರಾಗಿದ್ದಾಗ ನೇಮಿರಾಜ ನಾಯ್ಕ ಅವರು ಬಹುತೇಖ ಅಧಿಕಾರಿಗಳ ಪರವಾಗಿಯೇ ಇದ್ದು  ತಾವು ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದರು.
ಆದರೆ ಅದು ಶಾಶ್ವತವಲ್ಲ, ಜನ ಮನ್ನಣೆಯೇ ಮುಖ್ಯ ಎಂಬುದನ್ನು ಕಳೆದ ಎರೆಡು ಚುನಾವಣೆಯಲ್ಲಿ ಸೋಲುಕಂಡು, ಈ ಬಾರಿ ಜನರೊಂದಿಗೆ ಬೆರೆತು ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸಲಿದೆಂಬ ಮಾತಿನ‌ ಹಿನ್ನಲೆಯಲ್ಲಿ ಮತದಾನಕ್ಕೆ ಮನಿ ನೀಡಿದವರನ್ನು ಲೆಕ್ಕಿಸದೇ ಮತದಾರ ನೇಮಿರಾಜ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದರು.
ಇದರಿಂದಾಗಿ ಮನಿಯೇ ಮುಖ್ಯವಲ್ಲ, ಜನ‌ಮನ್ನಣೆ ಮುಖ್ಯ ಎಂದು ಅರಿತಿದ್ದಾರೆ ನೇಮಿರಾಜ್. ಅದಕ್ಕಾಗಿ
ಕಳೆದ ಬಾರಿಯಂತೆ ತಮ್ಮ ಹಿತವನ್ನೇ  ಮುಖ್ಯವಾಗಿರಿಸಿಕೊಳ್ಳದೇ, ಜನ‌ಹಿತಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿನ ಜನರ ಸಮಸ್ಯೆಗಳ ಅರ್ಜಿಗಳ ವಿಲೇವಾರಿ ಯಜ್ಞಕ್ಕೆ ಮುಂದಾಗಿದ್ದಾರೆ.
ಈ ಹಿನ್ನಲೆಯಲ್ಲಿ ತಮಗೆ ಸಂಬಂಧಿಸಿದ ರಾಜ್ಯ ಸರ್ಕಾರದ  ಎಲ್ಲಾ ಕಚೇರಿಗಳ ಅಧಿಕಾರಿಗಳಿಗೆ ಈ ತಿಂಗಳ ಅಮನತ್ಯದ ವರೆಗೆ ವಿಲೇವಾರಿಯಾಗಿರುವ ಅರ್ಜಿಗಳ ಮಾಹಿತಿಯ‌ನ್ನು ವಸ್ತು ನಿಷ್ಟವಾಗಿ ನೀಡಲು ಕೋರಿದ್ದಾರೆ.
ಇಷ್ಟೇ ಮಾಡಿದರೆ ಸಾಲದು:
ನೀವು ಚಾಪೆ ಕೆಳಗೆ ತೂರಿದರೆ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಾರೆ. ಸಲ್ಲಿಕೆಯಾದ ಅರ್ಜಿ, ಅದರ ಸ್ವರೂಪ, ಅಂಶಗಳು, ಯಾಕೆ ವಿಲೇವಾರಿ ಮಾಡಲಿಲ್ಲ ಎಂಬ ಬಗ್ಗೆ ಒಮ್ಮೆ ಬಹಿರಂಗವಾಗಿಯೇ ಸಾರ್ವಜನಿಕವಾಗಿ ಅಧಿಕಾರಿಗಳನ್ನು ಪ್ರಶ್ನಿಸುವ ಕೆಲಸ ಮಾಡಿದರೆ. ಆಗ ಒಂದಿಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಇಲ್ಲದಿದ್ದರೆ. ಇದು ಸಹ ಹತ್ತರಲ್ಲಿ ಹನ್ನೊಂದನೆಯಾದಾಗಬಹುದು.  ಇಲ್ಲಾ  ಗಾದೆ ಮಾತಿನಂತೆ ಹೊಸದಾಗಿ ಅಗಸ ಎತ್ತಿ ಎತ್ತಿ ಹೊಗೆದನಂತೆ ಎಂಬಂತೆ ಆಗಲಿದೆ.