ಹೀಗೆ ಅಭಿವೃದ್ಧಿ ಮಾಡ್ತಾರಂತೆ
ಎಸ್ ಎನ್ ಪೇಟೆ ಸರ್ಕಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ನಗರದಲ್ಲಿನ ಅನೇಕ ಸರ್ಕಲ್ ಗಳ ಅಭಿವೃದ್ಧಿ ಜೊತೆ ಇಲ್ಲಿನ ಸತ್ಯನಾರಾಯಣ ಪೇಟೆಯ ಗುರು ರಾಘವೇಂದ್ರ ಶ್ರೀಗಳ ಸರ್ಕಲ್ ನ್ನು ಸಹ ಚಿತ್ರದಲ್ಲಿ ಇರುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಿದೆಯಂತೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು,  ಪಾಲಿಕೆಯ ಸಹಕಾರದಿಂದ ಇದನ್ನು ಕೈಗೆತ್ತಿಕೊಂಡಿದೆ. ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ನೀಡಿದ ಮಾಹಿತಿಯಂತೆ. ಸರ್ಕಲ್ ಮಧ್ಯದಲ್ಲಿ ಹೈ ಮಾಸ್ಟ್ ಲೈಟ್ ಅಳವಡಿಸಲಿದೆ. ಇನ್ನು ನಾಲ್ಕು ಕಡೆಗಳಲ್ಲಿ  ಒಂದಿಷ್ಟು ಅಗಲೀಕರಣ ಮಾಡಿ  ಪ್ರೀ ಲೆಫ್ಟ್ ಮಾಡಲಿದೆ. ಇದಕ್ಕಾಗಿ 15 ರಿಂದ 20 ಲಕ್ಷ ರೂ ವೆಚ್ಚ ಮಾಡುತ್ತಿದೆಯಂತೆ.
ಸಧ್ಯ ರಸ್ತೆಯ ಡಾಂಬರೀಕರಣ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಇದರ ಜೊತೆ ಸರ್ಕಲ್ ಅಭಿವೃದ್ಧಿ ಕೈಗೊಂಡಿರುವುದು ಸೂಕ್ತವಾಗಿದೆ. ಸರ್ಕಲ್ ಮಾಡುವುದರಿಂದ ಬಸ್ ಗಳ ಸಂಚಾರಕ್ಕೆ ಸಮಸ್ಯೆ ಆಗಬಹುದು ಎಂಬ ಪ್ರಶ್ನೆಗೆ ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಲ್ ರಚನೆ ಮಾಡುತ್ತಿದೆಂದು ಹೇಳಿದ್ದಾರೆ.