ಹಿ.ಎಚ್.ಪಿ. ಭಜರಂಗದಳ ಶಾಖೆ ಉದ್ಘಾಟನೆ


ಗದಗ, ಜೂ. 20 : ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳ ಬೆಟಗೇರಿಯ 5ನೇ ವಾರ್ಡದಲ್ಲಿ ಶಾಖೆಯನ್ನು ತೆರೆಯಿತು.
ಹುಚ್ಚಿರೇಶ್ವರ ನಗರದ ಹುಚ್ಚಿರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಔಪಚಾರಿಕವಾಗಿ ಶಾಖೆಯ ಉದ್ಘಾಟನೆ ಜರುಗಿತು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿ ಧರ್ಮ, ದೇಶ ಮತ್ತು ಸಂಸ್ಕøತಿಯ ಉಳಿಸಲು ಇಂತಹ ಸಂಘಟನೆಯ ಅವಶ್ಯಕತೆ ಇದೆ. ಇಂದಿನ ಪರಿಸ್ಥಿತಿ ಯುದ್ಧದ ಪರಿಸ್ಥಿತಿ ಈ ಆಂತರಿಕ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಮೂಲಭೂತ ಜಿಹಾದಿಗಳು ಲವ್ ಜಿಹಾದ್ ಇವತ್ತು ಪಿ.ಎಫ್.ಐ ಸಂಘಟನೆ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿದೆ ಈ ಬಗ್ಗೆ ಒಗ್ಗಟ್ಟಿನಿಂದ ಇದನ್ನು ತಡೆಯಬೇಕು ಎಂದರು.
ರಾಜ್ಯ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಈ ದೇಶವನ್ನು ಇಸ್ಲಾಮಿಕರಣ ಮಾಡಲು ಯತ್ನಿಸುತ್ತಿದೆ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಭಗತ್‍ಸಿಂಗ್ ಸೇರಿದಂತೆ ಮುಂತಾದ ದೇಶ ಭಕ್ತರ ಹೆಸರನ್ನು ಸೇರ್ಪಡಿಸುವ ಬದಲು ಟಿಪ್ಪು ಸುಲ್ತಾನನ ಹೆಸರು ಸೇರಿಸುತ್ತಿರುವದು ದುರ್ದೈವದ ಸಂಗತಿ ಎಂದರು. ಈ ವಿಷಯವಾಗಿ ಹಿಂದೂ ಸಮಾಜ ಸಿಡಿದೆಳುವುದು ಅವಶ್ಯಕತೆ ಇದೆ. ಹಿಂದೂ ಹೆಣ್ಣು ಮಕ್ಕಳ ಹತ್ಯೆ, ಲವ್ ಜಿಹಾದ್, ಕ್ರೈಸ್ತ ಮಶಿನರಿಗಳಿಂದ ಮತಾಂತರ. ಹಿಂದೂಗಳಿಗೆ ಆಸೆ ಆಮಿಷ ಒಡ್ಡಿ ಇವತ್ತು ಹಿಂದುಗಳನ್ನ ಮತಾಂತರ ಮಾಡುವ ಕೆಲಸ ಕ್ರೈಸ್ತ ಮಶಿನರಿಗಳಿಂದ ನಡೆಯುತ್ತಿದೆ.
ಈ ಹಿಂದೆ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತ್ತು ಆದರೆ ಇಂದಿನ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ದೇಶಕ್ಕೆ ಕಂಟಕದ ಮತಾಂತರಕ್ಕೆ ಕುಮ್ಮಕ್ಕು ಕೊಡುವ ಕೆಲಸ ನಡೆದಿದೆ. ಅದಕ್ಕಾಗಿ ಎಲ್ಲಾ ಯುವಕರು ಹಿಂದೂ ಧರ್ಮ, ಸಂಸ್ಕøತಿ ಸಂರಕ್ಷಣೆಗಾಗಿ ಕೈಜೋಡಿಸಬೇಕು ಎಂದರು.
ನೂರಾರು ಕಾರ್ಯಕರ್ತರನ್ನು ಸಂಘಟನೆಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಭಜರಂಗದಳ ಕಾರ್ಯಕರ್ತ ಯಲ್ಲಪ್ಪ ಭಜಂತ್ರಿ, ಶಿವು ಪೂಜಾರ, ಪಂಪಾಪತಿ ಶಾವಿ, ಮಂಜು ಹಿಂಡಿ, ರಘು ಕಬೀರ್, ಮಾರು ಕೊನೆ, ಮಂಜುನಾಥ, ಅಕ್ಷಯ, ತೇಜಪ್ಪ, ಅರುಣ, ಶಂಕರ ಕಾಕಿ ಸೇರಿದಂತೆ ಹಲವಾರು ಯುವಕರಿದ್ದರು.