ಹಿರೇಹೆಗ್ಡಾಳ್ ನಲ್ಲಿ ಗ್ರಾಮವಾಸ್ತವ್ಯ ಗ್ರಾಮ ಸುತ್ತಾಡಿ ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ. 16 :- ರಾಜ್ಯ ಸರ್ಕಾರದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಪುನರಾರಂಭಗೊಂಡ ನಂತರ ರಾಜ್ಯದ ನೂತನ 31ನೇ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮವನ್ನು ವಾಸ್ತವ್ಯಕ್ಕೆ ಆಯ್ಕೆಮಾಡಿಕೊಂಡಿದ್ದು ಇಂದು ಗ್ರಾಮಕ್ಕೆ ಬೇಟಿ ನೀಡಿದಾಗ ಗ್ರಾಮಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ಕೋರಲಾಯಿತು ಜಿಲ್ಲಾಧಿಕಾರಿ ಕಾರ್ಯಕ್ರಮದತ್ತ ಸಾಗದೆ ನೇರವಾಗಿ ಗ್ರಾಮದ ಕಡೆ ಸಾಗಿದರು ಮತ್ತು ಜನರ ಅಹವಾಲು ಅಲ್ಲಿಯೇ ಸ್ವೀಕರಿಸಿ ಅಂಬೇಡ್ಕರ್ ನಗರಕ್ಕೆ ಬೇಟಿ ನೀಡಿ ದಲಿತರ ಮನೆಯೊಳಗೆ  ಪ್ರವೇಶ ಮಾಡಿ ದಲಿತ ಕಾಲೋನಿಯ ಮನೆಗಳನ್ನು ವೀಕ್ಷಿಸಿದರು ಮತ್ತು ಅಲ್ಲಿನ ಜನರಿಗೆ ಮನೆಗಳ ಅವಶ್ಯಕತೆ ಅರಿತು ತಾಲೂಕು ಪಂಚಾಯತಿ ಇಓ ಬಸಣ್ಣ ಅವರ ಗಮನಕ್ಕೆ ತಂದರು. ದಲಿತ ಕಾಲೋನಿಯಲ್ಲಿ ಮನೆ ನೀರಿನ ಸಮಸ್ಯೆ : ಗ್ರಾಮದ ಅಂಬೇಡ್ಕರ್ ನಗರದ ಕಾಲೋನಿಯಲ್ಲಿ ಹೆಚ್ಚಾಗಿ ಮನೆಗಳ ಸಮಸ್ಯೆ ಇದ್ದು ಮಳೆ ಬಂದರೆ ದೇವರೇ ದಿಕ್ಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಎದುರು ತಮ್ಮ ಗೋಳಾಟ ತೋಡಿಕೊಂಡರು ಮತ್ತು ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಕಾಲೋನಿಯ ಮಹಿಳೆಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರು ಶಾಂತವಾಗಿ ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಜನರಿಗೆ ಸಮಾಧಾನದ ಉತ್ತರ ನೀಡಿ ಸಂಬಂದಿಸಿದ ಇಲಾಖೆಗೆ ಸಮಸ್ಯೆ ಪರಿಹರಿಸುವಂತೆ ತಿಳಿಸಿದರು.     ಕೂಡ್ಲಿಗಿಯಿಂದ ಹಿರೇಹೆಗ್ಡಾಳ್ ಗ್ರಾಮಕ್ಕೆ ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪುಷ್ಪ ನೀಡುವ ಮೂಲಕ ಸ್ವಾಗತ ಕೋರಿದರು. 
ಗ್ರಾಮದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಅಲ್ಲಿ ವಿವಿಧ ಇಲಾಖೆಯ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು ಆಯಾ ಇಲಾಖೆಗೆ ಸಂಬಂದಿಸಿದ ಅಹವಾಲು ಅರ್ಜಿಗಳನ್ನು ಸಲ್ಲಿಸಿ ರಸೀದಿ ನೀಡಲಾಗುತಿತ್ತು ಆರೋಗ್ಯ ಇಲಾಖೆಯಿಂದ ಕಾರ್ಯಕ್ರಮಕ್ಕೆ ಬಂದೋಗೋ ಜನರಿಗೆ ಥರ್ಮಲ್ ಟೆಸ್ಟ್ ಮಾಡಿ ಸ್ಯಾನಿಟೈಸರ್ ಹಾಕಿ ಒಳಬಿಡಲಾಗಿತ್ತು ಮತ್ತು ಮಾಸ್ಕ್ ಧರಿಸಿಕೊಳ್ಳುವಂತೆ ಪ್ರತಿಯೊಬ್ಬರಿಗೂ ತಿಳಿಸಲಾಗಿತ್ತು. ಮತ್ತು ಕೋವಿಡ್ ಲಸಿಕೆ ಪಡೆಯದವರು ಲಸಿಕೆ ಹಾಕಿಸಿಕೊಳ್ಳುವ ತಿಳಿಹೇಳಿ ಮೊದಲ ಹಾಗೂ ಎರಡನೇ ಡೊಸ್ ಲಸಿಕೆ ನೀಡಲಾಗುತಿತ್ತು ಮತ್ತು ಮಹಿಳಾ ಮತ್ತು ಮಕ್ಕಳ ಶಿಶುಅಭಿವೃದ್ದಿ ಇಲಾಖೆಯಿಂದ ಪೌಷ್ಟಿಕ ಆಹಾರ ಮತ್ತು ಮಕ್ಕಳಿಕೆ ಆಟಿಕೆ ಸಾಮಾನುಗಳ ಶಿಕ್ಷಣ ನೀಡುವ ಕುರಿತಂತ ವೇದಿಕಾ ಮೇಳದಲ್ಲಿ ಮಹಿಳೆಯರಿಗೆ ಜಾಗೃತಿ ಕಾರ್ಯ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೂಡ್ಲಿಗಿ ತಹಸೀಲ್ದಾರ್ ಜಗದೀಶ್, ಇಓ ಬಸಣ್ಣ ಕೂಡ್ಲಿಗಿ ಡಿವೈ ಎಸ್ ಪಿ ಹರೀಶ, ಸಿಪಿಐ ವಸಂತ ವಿ ಅಸೋದೆ, ಪಿಎಸ್ಐ ಶರತಕುಮಾರ ಸೇರಿದಂತೆ ಕೂಡ್ಲಿಗಿ ತಾಲೂಕಿನ  ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಗಣ್ಯರು ಮುಖಂಡರು ಉಪಸ್ಥಿತರಿದ್ದರು.