ಹಿರೇಹಡಗಲಿ ಗ್ರಾ.ಪಂ. ಅಧ್ಯಕ್ಷರಾಗಿ ಮಂಗಳಾ ಆಯ್ಕೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.27: ತಾಲೂಕಿನ ಹಿರೇಹಡಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇದ್ಲಿ ಮಂಗಳಾ ಆಯ್ಕೆಯಾದರು.
ಅವಿಶ್ವಾಸ ಗೊತ್ತುವಳಿಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅವಿಶ್ವಾಸದಿಂದ ಪದಚ್ಯುತಿಯಾಗಿದ್ದ ಈಡಿಗರ ಸಾವಿತ್ರಮ್ಮ ಮತ್ತು ಇದ್ಲಿ ಮಂಗಳಾ ಸೇರಿ ಎರಡು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ನಡೆಯಿತು. ಇದ್ಲಿ ಮಂಗಳಾ 17 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಬರೀ 2 ಮತ ಗಳಿಸಿದ ಸಾವಿತ್ರಮ್ಮ ಪರಾಭವಗೊಂಡರು. ಪಂಚಾಯಿತಿಯ 21 ಸದಸ್ಯರಲ್ಲಿ 19 ಜನರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಗೈರಾಗಿದ್ದರು.
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕೆ.ಶರಣಮ್ಮ ಫಲಿತಾಂಶ ಪ್ರಕಟಿಸಿದರು.  ಗ್ರಾ.ಪಂ. ಸದಸ್ಯರು, ಪಿಡಿಒ ಹಾಗೂ ಗ್ರಾಮದ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.