ಹಿರೇಹಡಗಲಿಯಲ್ಲಿ ವೀರಭದ್ರೇಶ್ವರ ಅಗ್ನಿಕುಂಡ

oplus_0


ಸಂಜೆವಾಣಿ ವಾರ್ತೆ
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯಲ್ಲಿ ಗುರುವಾರ ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ ಜರುಗಿತು.
ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಟ್ಟೂರೇಶ್ವರ ದೇವಾಲಯ ಬಾವಿಗೆ ಕರೆತಂದು ಗಂಗೆ ಪೂಜೆ ನೆರವೇರಿಸಲಾಯಿತು. ನಂತರ ಗ್ರಾಮದ ಮುಖ್ಯ ಬೀದಿಯಲ್ಲಿ ವಿಜೃಂಭಣೆಯ ಉತ್ಸವ ನಡೆಯಿತು. ಸಮಾಳ, ನಂದಿಕೋಲು, ಪುರವಂತರ ಕುಣಿತ, ವೀರಭದ್ರೇಶ್ವರ ಒಡಪುಗಳು ಭಕ್ತರನ್ನು ರೋಮಾಂಚನಗೊಳಿಸಿದವು. ನೂರಾರು ಮಕ್ಕಳು, ಮಹಿಳೆಯರು, ಪುರವಂತರು  ಸ್ವಾಮಿಯನ್ನು ಜಪಿಸುತ್ತ ದೇಗುಲದ ಎದುರು ಹಾಕಿದ್ದ ಅಗ್ನಿ ಕುಂಡವನ್ನು ಹಾಯ್ದು ತಮ್ಮ ಹರಕೆ ತೀರಿಸಿದರು. ಹಿರೇಮಠದ ಪತ್ರಿಸ್ವಾಮಿ ಸಾನ್ನಿಧ್ಯ ವಹಿಸಿದ್ದರು.