ಸಂಜೆವಾಣಿ ವಾರ್ತೆ
ಕೊಪ್ಪಳ, ಜು.23: ತಾಲೂಕಿನ ಹಿರೇಸಿಂದೋಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾದ ಮಲ್ಲಮ್ಮ ಡಂಬ್ರಳ್ಳಿ ಹಾಗೂ ಉಪಾಧ್ಯಕ್ಷರಾದ ನಿರ್ಮಲವ್ವ ಮಾಲಿಪಾಟೀಲ ಅವರನ್ನು ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸನ್ಮಾನಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡುತ್ತಾ, ಮಹಾವಿದ್ಯಾಲಯಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯವನ್ನು ನಿರ್ಮಿಸಿ ಕೊಡುವುದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು, ಕಾಲೇಜು ಮೈದಾನವನ್ನು ಸಮತಟ್ಟುಗೊಳಿಸಿ, ವಿದ್ಯಾರ್ಥಿಗಳ ಆಟೋಟಗಳಿಗೆ ಅನುಕೂಲ ಮಾಡಿಕೊಡುವುದು, ಕಾಲೇಜು ಕಂಪೌಂಡ್ ಪ್ರವೇಶ ದ್ವಾರದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸುವುದು, ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳ ರಕ್ಷಣೆಗಾಗಿ ಒಬ್ಬ ಕಾವಲುಗಾರನನ್ನು ನೇಮಿಸುವುದು, ಅಪೂರ್ಣವಾಗಿರುವ ಆವರಣ ಗೋಡೆಯನ್ನು ಪೂರ್ಣಗೊಳಿಸಿ ಸುರಕ್ಷತೆ ಒದಗಿಸುವಂತೆ ಮನವಿ ಸಲ್ಲಿಸಿದರು. ಉಪನ್ಯಾಸಕರಾದ ಐ.ಎನ್.ಪಾಟೀಲ, ಲತಾ ಕೆ.ಜಿ., ಕೆ.ಉಮಾಕಾಂತರಾವ, ವೀರಶೇಖರ ಪತ್ತಾರ, ಅನಿತಾ ದಲಬಂಜನ್, ಆಂಜನೇಯ ಗುಜ್ಜಲ್, ಜಯಪಾಲರೆಡ್ಡಿ ಚಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರಾದ ರೇವಪ್ಪ ಡೊಳ್ಳಿನ, ರಾಮಣ್ಣ ಡೊಳ್ಳಿನ, ರೇಣುಕಮ್ಮ ಕೊಳ್ಳಿ, ನೀಲಮ್ಮ ಯತ್ನಟ್ಟಿ, ಗಾಳೆವ್ವ ಪೂಜಾರ, ಹಿರಿಯರಾದ ಮುತ್ತುರಾಜ ಡೊಳ್ಳಿನ, ರೇವಪ್ಪ ಬಾರಕೇರ, ರಾಮಪ್ಪ ಡಂಬ್ರಹಳ್ಳಿ, ಗಾಳೆಪ್ಪ ಹಣವಾಳ, ಮಂಜನಗೌಡ ಮಾಲಿಪಾಟೀಲ, ಗಾಳೆಪ್ಪ ಪೂಜಾರ, ಬಸವರಾಜ ದಳಪತಿ, ಹನುಮಂತಗೌಡ ಮಾಲಿಪಾಟೀಲ, ಸೀಮನಗೌಡ ಮಾಲಿಪಾಟೀಲ, ವೆಂಕಟೇಶ ಹುಡೇದ, ಶಾಂತನಗೌಡ ಮಾಲಿಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.