ಹಿರೇಸಾವಳಗಿ: ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ,ಏ.3- ಸುಕ್ಷೇತ್ರ ತಾಲೂಕಿನ ಹಿರೇ ಸಾವಳಗಿ ಗ್ರಾಮದ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವÀ ಪ್ರಾರಂಭಗೊಂಡಿದ್ದು, ಇದೇ ಏ.5ರಂದು ಭವ್ಯ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಾತ್ರಾ ಮಹೋತ್ಸವ ಮಾ.31 ಪ್ರಾರಂಭಗೊಂಡಿದ್ದು, ಏ.7ರ ವರೆಗೆ ಪ್ರತಿದಿನ ವಿವಿಧ ಉತ್ಸವ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.3ರಂದು ಸಂಜೆ ವಸ್ತ್ರದಾನ, ಏ.4ರಂದು ರಾತ್ರಿ 4ಕ್ಕೆ ಉಚ್ಚಾಯು ಉತ್ಸವ, ಏ.5ರಂದು ಹನುಮಾನ ಜಯಂತಿ ಹಾಗೂ ದವನದ ಹುಣ್ಣಿಮೆ ರಾತ್ರಿ 8ಕ್ಕೆ ಪೀಠಾಧಿಪತಿ ಪೂಜ್ಯ ಗುರುಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ. ಏ.6ರಂದು ಮದ್ದು ಸುಡುವುದು, ಏ.7ರಂದು ಭಜನೆ, ಗಾಯನ ವಾದನ ಗೀಗೀ ಪದಗಳು ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.