ಹಿರೇರೂಗಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ

ಇಂಡಿ:ಫೆ.3: ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಭಾರತದ ಸಂವಿಧಾನ ರಚನೆಯಾಗಿ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆರಂಭವಾದ ‘ಸಂವಿಧಾನ ಜಾಗೃತಿ ಜಾಥಾ’ವನ್ನು ಶುಕ್ರವಾರ ಸಂಜೆ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಗತಿಸಿ ವಿಶೇಷ ಮೆರವಣಿಗೆ, ಉಪನ್ಯಾಸ ಮೂಲಕ ಜಾಗೃತಿ ಮೂಡಿಸಲಾಯಿತು.
ಇಂಡಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಿ ಜೆ ಇಂಡಿ ಮಾತನಾಡಿ, ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ. ಡಾ.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕು-ಕರ್ತವ್ಯಗಳನ್ನು ನಾವೆಲ್ಲರೂ ಅನುಪಾಲಿಸಿಕೊಂಡು ಸುಸ್ಥಿರ ಬದುಕು ರೂಪಿಸಿಕೊಳ್ಳೋಣ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಉಪನ್ಯಾಸ ನೀಡುತ್ತಾ,
ಸಂವಿಧಾನವು ರಾಷ್ಟ್ರದ ಮೂಲಭೂತ ಕಾನೂನು ಆಗಿದ್ದು, ಅದು ದೇಶದ ಆಡಳಿತದ ಚೌಕಟ್ಟನ್ನು ಹೊಂದಿಸುವ ಅತ್ಯಗತ್ಯ ದಾಖಲೆಯಾಗಿದೆ. ಸಂವಿಧಾನದ ಆಶೋತ್ತರ, ಮೌಲ್ಯಗಳನ್ನು ಅರಿತು ನಾವೆಲ್ಲರೂ ನಡೆಯಬೇಕಿದೆ ಎಂದು ಹೇಳಿದರು.
ಪಿಡಿಓ ಬಸವರಾಜ ಬಬಲಾದ ಮಾತನಾಡಿ,
ಸಂವಿಧಾನವು ಜನತೆಯ ಹಕ್ಕುಗಳ ಮೂಲವಾಗಿದೆ. ವಿಶ್ವದ ದೀರ್ಘ ಸಂವಿಧಾನ ನಮ್ಮದಾಗಿದ್ದು,ಅದರ ಸೌಂದರ್ಯವೇ ಸಮಾನತೆಯಾಗಿದೆ. ಅದು ನಮ್ಮ ರಾಷ್ಟ್ರದ ದಿಕ್ಸೂಚಿಯಿದ್ದಂತೆ ಎಂದು ಹೇಳಿದರು.
ಜಾಥಾ ನೋಡಲ್ ಅಧಿಕಾರಿ ಇಂಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಆನಂದ ರತ್ನಾಕರ,
ಇಂಡಿ ಡಿ ಎಸ್ ಎಸ್ ಸಂಘದ ಅಧ್ಯಕ್ಷ ವಿನಾಯಕ ಗುಣಸಾಗರ, ಬಿ ಆರ್ ಪಿ ಅಧಿಕಾರಿ ಆಯ್ ಜಿ ಆಳೂರ, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಹಂಚಿನಾಳ,ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ, ಹಿರೇರೂಗಿ ಸಿ ಆರ್ ಪಿ ಸಂತೋಷ ಚವ್ಹಾಣ, ಮಹೇಶ ಸೊಲಂಕರ, ಶ್ರೀಧರಗೌಡ ಬಿರಾದಾರ, ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಬೇನೂರ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವಿ ವೈ ಪತ್ತಾರ, ಎ ಎಂ ಬೆದ್ರೇಕರ, ಎಸ್ ಎಲ್ ಪವಾರ,
ಶಿಕ್ಷಕರಾದ ಎಸ್ ಆರ್ ಚಾಳೇಕರ, ಎಸ್ ಡಿ ಬಿರಾದಾರ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು,
ಭಾಗವಹಿಸಿದ್ದರು.