ಹಿರೇಮೇಗಳಗೆರೆ ಅಂಚೆ ಕಚೇರಿಗೆಸಂಪೂರ್ಣ ” ಮಹಿಳಾ ಸಮ್ಮನ್” ಗೌರವ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.01: ಮಹಿಳಾ ಸಬಲೀಕರಣಕ್ಕೆ ಅಂಚೆ ಇಲಾಖೆಯ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಅರಸೀಕೆರೆ ಹೋಬಳಿಯ ಹಿರೇಮೇಗಳಗೆರೆ ಗ್ರಾಮವು ಸಂಪೂರ್ಣ ಮಹಿಳಾ ಸಮ್ಮಾನ್ ಗ್ರಾಮ ಆಗಿರುವುದು ನಮ್ಮ ಬಳ್ಳಾರಿ ವಿಭಾಗಕ್ಕೆ ಒಂದು ಹೆಮ್ಮೆಯ ವಿಷಯ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ವಿ.ಎಲ್ ಚಿತ್ತಕೋಟೆ ಹರ್ಷ ವ್ಯಕ್ತಪಡಿಸಿದರು.
ಹಿರೇಮೇಗಳಗೆರೆ ಗ್ರಾಮದಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರ 140 ಖಾತೆಗಳನ್ನು ತೆರೆಯುವ ಮೂಲಕ ಇಡೀ ಗ್ರಾಮವೇ ಸಂಪೂರ್ಣ ಮಹಿಳಾ ಸಮ್ಮನ್ ಗ್ರಾಮ ವಾಗಿರುತ್ತದೆ.
ಬಳ್ಳಾರಿ ವಿಭಾಗದಲ್ಲಿ ಸುಮಾರು 6000 ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಖಾತೆಗಳನ್ನು ತೆರೆಯುವ ಮೂಲಕ ಉಳಿದ ಜಿಲ್ಲೆಗಳಿಗೆ ಮಾದರಿಯಾಗಿದೆ.
ಹರಪನಹಳ್ಳಿ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಶ್ರೀ ರಾಜಪ್ಪ ಬಿ ಭಾರಿಕರ್ ಮಾತನಾಡುತ್ತಾ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಖಾತೆಗಳನ್ನು ತೆರೆಯುದರ ಮೂಲಕ ಮಹಿಳೆಯರು ತಮ್ಮ ಜೀವನದ ಭದ್ರತೆಯನ್ನು ಇನ್ನಷ್ಟು ಭದ್ರಗೊಳಿಸಲು ಮುಂದಾಗುತ್ತಿದ್ದಾರೆ. ಹಾಗೂ ಇದರಿಂದ ಅಂಚೆ ಇಲಾಖೆಯು ಸುಭದ್ರವಾಗಿರುತ್ತದೆ ಎಂದರು
ಹಾಗೆಯೇ ಅರಸೀಕೆರೆ ಉಪ ಅಂಚೆ ಕಚೇರಿ ಅಡಿಯಲ್ಲಿ ಹಿರೇಮೇಗಳಗೆರೆ, ಕಮ್ಮತಹಳ್ಳಿ ಹಾಗೂ ಚಟ್ನಿಹಳ್ಳಿ ಒಟ್ಟು 3 ಗ್ರಾಮಗಳನ್ನು ಸಂಪೂರ್ಣ ಗ್ರಾಮಗಳನ್ನಾಗಿ ಘೋಷಣೆ ಮಾಡಿದರು. ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ V. L ಚಿತಕೋಟೆ ಹಾಗೂ ಹರಪನಹಳ್ಳಿ ಉಪ ವಿಭಾಗದ ಅಂಚೆ ನೀರಿಕ್ಷಕರಾದ ಶ್ರೀ ರಾಜಪ್ಪ ಬಾರಿಕಾರ, ಅರಸೀಕೆರೆ ಅಂಚೆಪಾಲಕರಾದ ಶ್ರೀ ವೆಂಕಟೇಶ್ ಹಾಗೂ ಹಿರೇಮೇಗಳಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಪರಶುರಾಮಪ್ಪ ಹಾಗೂ ಅರಸೀಕೆರೆ ಅಂಚೆ ಕಚೇರಿಯ ಎಲ್ಲಾ ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು.