
ದಾವಣಗೆರೆ.ಮೇ.೧೫: ಜಗಳೂರು ತಾಲ್ಲೂಕು ಹಿರೇಮಲ್ಲನಹೊಳೆ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಲಭಿಸಿದೆ.ಪರೀಕ್ಷೆಗೆ ೨೮ ವಿದ್ಯಾರ್ಥಿಗಳು ಹಾಜರಾಗಿದ್ದು, ವಿಶಿಷ್ಟ ದರ್ಜೆಯಲ್ಲಿ ೧೧ ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ ೧೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆರ್. ಸುಮಾ ೬೨೫ ಕ್ಕೆ ೬೦೦ ಅಂಕಗಳನ್ನು ಗಳಿಸಿ, ಶೇ. ೯೬ ಫಲಿತಾಂಶ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾಳೆ. ಸಿ. ಮೋಕ್ಷಾ ೫೯೦ (ಶೇ.೯೪.೪೦), ಎಸ್. ಹರ್ಷಿತಾ ೫೮೭ (ಶೇ.೯೩.೯೨), ಎಂ.ಪಿ. ಗೌತಮಿ ೫೫೭, ಸಿ. ಲತಾ ೫೫೬, ಟಿ. ಗೌತಮ್ ೫೫೦. ಆರ್. ರಮ್ಯ ೫೫೦, ಬಿ. ಶರತ್ ೫೩೮, ಎನ್. ಅಕ್ಷತಾ ೫೩೭, ಜಿ. ಪಲ್ಲವಿ ೫೩೭೭, ಪಿ.ವಿ. ಚೈತ್ರ ೫೩೫, ಆರ್. ಕೃಷ್ಣಮೂರ್ತಿ ೫೨೯ ಹಾಗೂ ಎಲ್. ವಿನೋದ್ ರಾಜ್ ೫೨೯ ಅಂಕಗಳನ್ನು ಗಳಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಮುಖ್ಯಶಿಕ್ಷಕ ತೋಟಗಂಟಿ ಪ್ರಕಾಶ್ ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.