ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ವಚನ ಪಲ್ಲವಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ

ಭಾಲ್ಕಿ:ಸೆ.21: ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಸಂಯುಕ್ತಾಶ್ರಯದಲ್ಲಿ ಶರಣ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಹಾಗೂ 292ನೆಯ ಮಾಸಿಕ ಶರಣ ಸಂಗಮ ಮತ್ತು ಡಾ. ಪಲ್ಲವಿ ಪಾಟೀಲ ವಿರಚಿತ ವಚನ ಪಲ್ಲವಿ ಗ್ರಂಥ ಲೋಕಾರ್ಪಣೆ ಆಮಂತ್ರಣ ಕಾರ್ಯಕ್ರಮವು ದಿನಾಂಕ 22-09-2023 ಸಾಯಂಕಾಲ 5-30 ಗಂಟೆಗೆ ಚನ್ನಬಸವಾಶ್ರಮ ಭಾಲ್ಕಿಯಲ್ಲಿ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ಘ.ಚ. ಡಾ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು ಅನುಭವಮಂಟಪ ಬಸವಕಲ್ಯಾಣ ಅವರು, ನೇತೃತ್ವವನ್ನು ಪೂಜ್ಯ ಶ್ರೀ ಮ.ಘ.ಚ. ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ಹಾಗೂ ವಚನ ಅಧ್ಯಕ್ಷತೆಯನ್ನು ಶರಣ ರಮೇಶ ಮಾನಶೆಟ್ಟಿ ಹೆಡಗಾನೂರ ನಿವೃತ್ತ ಶಿಕ್ಷಕರು ಕುಂಟೆಸಿರ್ಸಿ ಅವರು ವಹಿಸಲಿದ್ದಾರೆ. ಅನುಭಾವವನ್ನು ಶರಣ ಸತೀಶ ಮಡಿವಾಳ ಪ್ರಧಾನ ಕಾರ್ಯದರ್ಶಿಗಳು ಮಡಿವಾಳ ಸಮಾಜ ಭಾಲ್ಕಿ ಅವರು ನೆರವೇರಿಲಿದ್ದಾರೆ. ಶರಣ ಗಣೇಶ ಜಾಧವ ಶಿಕ್ಷಕರು ಸರಕಾರಿ ಪ್ರೌಢಶಾಲೆ ನಿಟ್ಟೂರು (ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು) ಅವರಿಗೆ ಗೌರವ ಸನ್ಮಾನ ನೆರವೇರುವುದು. ಪುಸ್ತಕ ಪರಿಚಯವನ್ನು ಶರಣೆ ಮಲ್ಲಮ್ಮ ನಾಗನಕೇರೆ ಅಧ್ಯಕ್ಷರು ಮಹಿಳಾ ಕದಳಿ ವೇದಿಕೆ ಭಾಲ್ಕಿ ಅವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶರಣ ದಿಲೀಪ್ ಮಡಿವಾಳ ಅಧ್ಯಕ್ಷರು ಮಡಿವಾಳ ಸಮಾಜ ಭಾಲ್ಕಿ, ಶರಣ ಭೀಮರಾವ ವಡ್ಡೆ ನಿವೃತ್ತ ಶಿಕ್ಷಕರು ಕಲವಾಡಿ, ಶರಣ ಸಂತೋಷ ಮಡಿವಾಳ ಉಪಾಧ್ಯಕ್ಷರು, ಮಡಿವಾಳ ಸಮಾಜ ಭಾಲ್ಕಿ, ಶರಣ ಜೈರಾಜ ಧೂಮ್ಮನಸೂರೆ ಶಿಕ್ಷಕರು ಎಸ್. ಎಸ್. ಬಿ. ಪ್ರೌಢಶಾಲೆ ಕಾಸರತುಗಾಂವ ಉಪಸ್ಥಿತರಿರುವರು. ಬಸವ ಗುರುಪೂಜೆಯನ್ನು ಡಾ. ಪಲ್ಲವಿ ಪಾಟೀಲ ಸೇಡಂ (ವಚನ ಪಲ್ಲವಿ ಗ್ರಂಥದ ಲೇಖಕರು) ನೆರವೇರಿಸಲಿದ್ದಾರೆ. ನಿರೂಪಣೆಯನ್ನು ಶರಣ ದೀಪಕ ಥಮಕೆ ಭಾಲ್ಕಿ ಹಾಗೂ ಸ್ವಾಗತವನ್ನು ಶರಣ ವೀರಣ್ಣ ಕುಂಬಾರ ಭಾಲ್ಕಿ ಅವರು ನೆರವೇರಿಸಲಿದ್ದಾರೆ. ವಚನ ಸಂಗೀತವನ್ನು ಶರಣ ಯಲ್ಲನಗೌಡ ಬಾಗಲಕೋಟ ಅವರು ನಡೆಸಿಕೊಡಲಿದ್ದಾರೆ. ಎಂದು ಅಕ್ಕನ ಬಳಗ,
ಭಾರತೀಯ ಬಸವ ಬಳಗ ಹಾಗೂ ಹಿರೇಮಠ ಸಂಸ್ಥಾನ ಭಾಲ್ಕಿಯ ಶ್ರೀ ಶಾಂತಯ್ಯ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ