ಹಿರೇಮಠ ಸಂಸ್ಥಾನದಿಂದ ಸಾಧಕರಿಗೆ ಪ್ರಶಸ್ತಿ

ಭಾಲ್ಕಿ:ಎ.18: ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ, ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2023ರ ನಿಮಿತ್ತ ಹಿರೇಮಠ ಸಂಸ್ಥಾನದ ವತಿಯಿಂದ ಸಾಹಿತ್ಯ, ಕಲೆ, ಸಂಗೀತ, ಯುವ ಸಂಘಟನೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಸಾಧಕರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಇಲ್ಲಿಯ ಚನ್ನಬಸವಾಶ್ರಮ ಪರಿಸರದಲ್ಲಿ 19 ರಿಂದ 23ರ ವರೆಗೆ ನಡೆಯುವ ಐದು ದಿನದ ಕಾರ್ಯಕ್ರಮದಲ್ಲಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿಗೆ ಆಯ್ಕೆಯಾದವರ ವಿವರ ಹೀಗಿದೆ

ಕುಮಾರಿ ದಿಯಾ ಹೆಗೆಡ (ಗುರು ಚನ್ನಬಸವ ಕಲಾ ಶ್ರೀ ಪ್ರಶಸ್ತಿ)
ಧೂಳಪ್ಪ ಮುಡಬಿ (ಸಿದ್ಧರಾಮ ಜಂಬಲದಿನ್ನಿ ವಚನ ಸಂಗೀತ ಪ್ರಶಸ್ತಿ)
ಪಾಲನೇತ್ರ ಬೆಂಗಳೂರು (ಪೂಜ್ಯ ಚನ್ನಬಸವ ಪಟ್ಟದ್ದೇವರ ಕನ್ನಡ ಸೇವಾ ಪ್ರಶಸ್ತಿ)
ಎಲ್.ಶಿವಸಂಗಪ್ಪ ಮೈಸೂರು (ನಾಡೋಜ ಡಾ.ಜಿ.ಎಸ್.ಖಂಡೇರಾವ ಚಿತ್ರಕಲಾ ಪ್ರಶಸ್ತಿ)
ಮಠ ಮಲ್ಲಿಕಾರ್ಜುನ ಮೈಸೂರು (ಡಾ.ಜಿ.ಬಿ.ವಿಸಾಜಿ ಸಾಹಿತ್ಯ ಪ್ರಶಸ್ತಿ)
ರೇಖಾ ಅಪ್ಪಾರಾವ ಸೌದಿ ಬೀದರ್(ಡಾ.ಚನ್ನಬಸವ ಪಟ್ಟದ್ದೇವರ ಸಾಂಸ್ಕøತಿಕ ಸೇವಾ ಪ್ರಶಸ್ತಿ)
ಶಿವಾನಂದ ಮಹಾರಾಜ ದಾಬಶಡಕರ್ ಮಹಾರಾಷ್ಟ್ರ(ಬಸವತತ್ವ ಪ್ರಸಾರ ಸೇವಾ ಪ್ರಶಸ್ತಿ)
ಜಯಶ್ರೀ ಸುಕಾಲೆ ಬೀದರ್ (ಬೀದರ ಜಿಲ್ಲೆಯ ಉತ್ತಮ ಗ್ರಂಥ ಪ್ರಶಸ್ತಿ)
ಓಂ ಪಾಟೀಲ್ ಭಾಲ್ಕಿ (ಪೂಜ್ಯ ಚನ್ನಬಸವ ಪಟ್ಟದ್ದೇವರು ಯುವ ಪ್ರಶಸ್ತಿ)