ಹಿರೇಮಠ ದಂಪತಿಗಳಿಗೆ ಕಲಾ ವೈಭವ ಪ್ರಶಸ್ತಿ

ಚಿಟಗುಪ್ಪ :ಮಾ.1:ತಾಲೂಕಿನ ಕೋಡಂಬಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ ಜರಗಿದ ಪೀಠಾರೋಹಣ ಮಹೋತ್ಸವದ ಕಾರ್ಯಕ್ರಮದಲ್ಲಿ ಕಲ್ಯಾಣ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಶ್ರೀಮತಿ ಅಶ್ವಿನಿ ರಾಜಕುಮಾರ್ ಹಿರೇಮಠ್ ಬಂಪಳ್ಳಿ ದಂಪತಿಗಳಿಗೆ ಕಲಾ ವೈಭವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕೋಡಂಬಲ್ ಹಾಗೂ ಬೆಳಗಾವಿ ಜಿಲ್ಲೆಯ ತಪೆÇೀ ರತ್ನ ಷ. ಬ್ರ. ಡಾ, ವೀರಪ್ರಭು ಪಂಡಿತರಾಧ್ಯ ಶಿವಾಚಾರ್ಯರು ಕಲಾ ವೈಭವ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ನಿವೃತ್ತ ಐಜಿಪಿ ಶ್ರೀ ಶಂಕರ್ ಬಿದ್ರಿ ಅವರು ಹುಮುನಾಬಾದ್ ಶಾಸಕರಾದ ಶ್ರೀ ರಾಜಶೇಖರ್ ಬಿ ಪಾಟೀಲ್ ಹಾಗೂ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ಹಾಗೂ ಹರಚರಮೂರ್ತಿಗಳು ಅನೇಕ ರಾಜಕೀಯ ಧುರಿಣರು ಉಪಸ್ಥಿತರಿದ್ದರು