ಹಿರೇಬೂದೂರು ಮಾರ್ಗದಲ್ಲಿ ಬಸ್ ಸಂಚಾರ

ದೇವದುರ್ಗ,ಆ.೧೬-
ತಾಲೂಕು ಕೇಂದ್ರದಿಂದ ಗೂಗಲ್‌ವರೆಗೆ ಸುಮಾರು ಐದಾರು ಹಳ್ಳಿಗಳ ಜನರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕಾಗಿ ಶಾಸಕಿ ಕರೆಮ್ಮ ಜಿ. ನಾಯಕ ಸೂಚನೆ ಮೇರೆಗೆ ಸೋಮವಾರ ಹೊಸ ಬಸ್ ಸಂಚಾರ ಆರಂಭಿಸಲಾಯಿತು.
ದೇವದುರ್ಗದಿಂದ ಮಧ್ಯಾಹ್ನ ೧ಗಂಟೆಗೆ ಸುಂಕೇಶ್ವರಹಾಳ, ಹಿರೇಬೂದೂರು, ಮಸಿಹಾಳ, ಮಾತ್ಪಳ್ಳಿ, ಗೂಗಲ್‌ವರೆಗೆ ಹೊಸ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ. ಹೊಸ ಮಾರ್ಗದ ಬಸ್ ಬಂದನಂತರ ಹಿರೇಬೂದೂರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್‌ಗೆ ತಳಿರುತೋರಣ ಕಟ್ಟಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು. ಚಾಲಕ ಹಾಗೂ ನಿರ್ವಹಕನಿಗೆ ಸನ್ಮಾನಿಸಿದರು.
ಸುಮಾರು ಐದಾರು ಹಳ್ಳಿಗಳ ಜನರು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ಸುಮಾರು ೩೦ಕಿಮೀ ಖಾಸಗಿ ವಾಹನಗಳಲ್ಲಿ ಓಡಾಟ ನಡೆಸಬೇಕಿತ್ತು. ಗೂಗಲ್, ಸುಂಕೇಶ್ವರಹಾಳ, ಹಿರೇಬೂದೂರು ಪ್ರೌಢಶಾಲೆಗೆ ಬರುವಂಥ ಮಸಿಹಾಳ, ಮಾತ್ಪಳ್ಳಿ, ಹದ್ದಿನಾಳ, ಬೂದಿನಾಳ, ಇಂಗಳದಾಳ ಸೇರಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಈ ಬಸ್ ಸಂಚಾರದಿಂದ ಜನರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ.
ಹಿರೇಬೂದೂರು ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ, ಸದಸ್ಯರಾದ ಶರಣಗೌಡ, ಮಹೇಶ, ದೊಡ್ಡ ಶರಣಪ್ಪಗೌಡ ಹದ್ದಿನಾಳ, ದುರುಗಪ್ಪ ನಾಯಕ, ಹುಸೇನ್ಸಾಬ್, ಮಹೇಶ ಇತರರಿದ್ದರು.

೧೬ಡಿವಿಡಿ೨