ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

ಹೊನ್ನಾಳಿ.ಮಾ.31 :  ತಾಲೂಕಿನ ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಗುರುವಾರ ರಾಮನವಮಿಯಂದು ಜಗುಗಿತು, ಭಕ್ತರು ರಥೋತ್ಸವಕ್ಕೆ ತೆಂಗಿನಕಾಯಿ ,ಉತ್ತತ್ತಿ ಬಾಳೆಹಣ್ಣು, ಹಾಗೂ ಮೆಣಸಿನಕಾಳುಗಳನ್ನ ಎಸೆಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು,ನಂತರ ದಿಂಡು ಉರುಳುವುದು,ಹರಕೆ,ಕಾರ್ಯಗಳು ಜರುಗಿದವು,ನಂತರ ಗ್ರಾಮದ ರಾಜಬೀದಿಗಳಲ್ಲಿ ಆಂಜನೇಯ ಸ್ವಾಮಿ,ಬೇಟೆಮರದಮ್ಮದೇವಿ,ಹಾಗೂ ಹೊಳೆಹರಳಹಳ್ಳಿಯ ಆಂಜನೇಯನ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಿತು, ಸಂಜೆ ಮುಳ್ಳೋತ್ಸವ ಹಾಗೂ ಭೂತನಸೇವೆ ನಡೆಯಿತು,