ಹಿರೇಕೋಗಲೂರು ಮಾರ್ಗದ ಬಸ್ ಸಂಚಾರಕ್ಕೆ ಒತ್ತಾಯ

ಹಿರೇಕೋಗಲೂರು.ಡಿ.೨೭; ಕಳೆದ ಮಾರ್ಚಿ ತಿಂಗಳಲ್ಲಿ ಘೋಷಿತವಾದ ಲಾಕ್ ಡೌನ್   ಪ್ರಯುಕ್ತ ಸ್ಥಗಿತವಾಗಿದ್ದ ಬಸ್‌ಗಳ ಸಂಚಾರ ಇದುವರೆವಿಗೂ ಸಂಚಾರವನ್ನು ಆರಂಭಿಸದೆ ಇರುವುದು ಈಮಾರ್ಗದ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗಿದೆ ಹಿರೇಕೋಗಲೂರಿನ ಜನರು ಚನ್ನಗಿರಿ, ಮತ್ತು ದಾವಣಗೆರೆಗೆ ಹೋಗಬೇಕಾದರೆ 10 ಕಿ,ಮೀ,ದೂರದ ಸಂತೇಬೆನ್ನೂರಿಗೆ ಮತ್ತು 15 ಕಿ,ಮೀ, ದೂರದ ತ್ಯಾವಣಿಗೆಗೆ ಬೈಕ್ ಗಳಲ್ಲಿ  ಬೈಕ್‌ಗಳ ಸೌಲಭ್ಯ ಇಲ್ಲದವರು ನಡೆದು ಕೊಂಡುಹೋಗಿ ಬರಬೇಕಾಗಿದೆ ಆಟೋರಿಕ್ಷಗಳ ಸೌಲಭ್ಯವೂ ಇರುವುದಿಲ್ಲ, ಈಮಾರ್ಗದಲ್ಲಿ ಹಿಂದೆ ಸಂಚರಿಸುತ್ತಿದ್ದ ಎಲ್ಲಾಬಸ್ಸುಗಳು ಪುನಃ ಸಂಚಾರ ಆರಂಭಸಿದರೆ ಪ್ರತಿ ಗಂಟೆಗೊಂದರಂತೆ ಬಸ್ ಸೌಕರ್ಯವಿತ್ತು ಈಮಾರ್ಗದಲ್ಲಿ ಸರ್ಕಾರಿ ಬಸ್‌ಗಳ ಸೌಲಭ್ಯವಿರುವುದಿಲ್ಲ,ಎಲ್ಲಾಖಾಸಗೀ ಬಸ್‌ಗಳೇ ಸಂಚರಿಸುತ್ತಿದ್ದು ಈವರೆವಿಗೂ ಪುನರಾರಂಭಿಸದಿರುವುದು ಈ ಗ್ರಾಮದ ಜನರ ಪರಿಸ್ಥಿತಿ ದ್ವೀಪದ ಮಧ್ಯೆ ವಾಸಿಸುವ ಜನಗಳ ವೇದನೆಯಂತಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರಿ ಬಸ್‌ನ ದಾವಣಗೆರೆ ಡಿಪೋದ ವ್ಯವಸ್ಥಾಪಕರು  ಗ್ರಾಮದ  ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಚಿಕ್ಕೋಗಲೂರು, ದೊಡ್ಡಮಲ್ಲಾಪುರ, ಬೆಳ್ಳಿಗನೂಡು, ಗಿರಿಯಾಪುರ, ಆಲೂರು,ಈರಗನ  ಹಳ್ಳಿ, ಕೆಂಪನಹಳ್ಳಿ, ವೆಂಕಟೇಶವರ ಪುರಂ, ನಲ್ಕುದುರೆ ಇನ್ನೂಮುಂತಾದ ಗ್ರಾಮಗಳ ಜನರು ಕಳೆದ 9 ತಿಂಗಳಿನಿಂದಸಾರಿಗೆ ಸಂಪರ್ಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ,  ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಬಸ್‌ಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.