ಹಿರೇಕೋಗಲೂರಿನಲ್ಲಿ ಧಾರಾಕಾರ ಮಳೆ

ಹಿರೇಕೋಗಲೂರು.ಜ.೯; ಇದ್ದಕ್ಕಿದ್ದಂತೆ  ಬಿರುಸಾದ ಮಳೆ ಸುರಿಯುವ ಮೂಲಕ ಇಳೆಯನ್ನೆಲ್ಲ ಜಲಮಯವಾಗಿಸಿತು, ಈ ಮಳೆಯಿಂದ ತೋಟದ ಬೆಳೆಗಾರರು ಮತ್ತು ತರಕಾರಿಯ ಬೆಳೆಗಾರರು ಸಂತಸಗೊಂಡಿದ್ದಾರೆ. ತೋಟದ ಬೆಳೆಗಳಿಗೆ  ಎರಡು ವಾರ ನೀರು ಹರಿಸುವುದು ಉಳಿತಾಯವಾಗಿದೆ ಎನ್ನುತ್ತಾರೆ ಗ್ರಾಮದ ರೈತ ಶಶಿಕುಮಾರ್. ಕಡಲೆ ಬೆಳೆಗಳಿಗೆ ಮತ್ತು ಹಿಂಗಾರಿ ಜೋಳದ ಬೆಳೆಗಳಿಗೆ ಹಾನಿಯಾಗಿದೆ ಎನ್ನುತ್ತಾರೆ ಕಡಲೆ ಬೆಳೆಗಾರ ರೈತ ಮಂಜಪ್ಪ. ಮತ್ತು ಬಸವರಾಜಪ್ಪ.