ಮಾನ್ವಿ,ಜೂ.೨೮-
ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಕೃಷಿ ಇಲಾಖೆಯ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಬಡ ರೈತರಿಗಾಗಿ ನೀಡಬೇಕಾಗಿರುವ ಪೈಪಗಳ (ಸಿಂಕ್ಲರ್ ಪೈಪ್) ಗಳನ್ನು ಸರಬರಾಜು ಮಾಡಲು ಟೆಂಡರ್ ಪಡೆದು ಕೃಷಿ ಇಲಾಖೆಯ ವತಿಯಿಂದ ಸಹಾಯಧನದ ಮೂಲಕ ಸಿಂಪರಣೆ ಪೈಪ್‌ಗಳು(ಸ್ಪಿಂಕ್ಲರ್) ಸರಬರಾಜು ಮಾಡಿದ ನಿಯಮನುಸಾರ ಮೆ ವಿಶ್ವಕರ್ಮ ಅಗ್ರೀಕಲ್ಟರ್ ಎಂಪ್ಲಾಯಡ್ ಸಂಸ್ಥೆ ಇವರು ಸರಕಾರದ ಐಎಸ್‌ಐ ಗುಣಮಟ್ಟದ ಪೈಪ್‌ಗಳನ್ನು ಸರಬರಾಜು ಮಾಡಬೇಕಾಗಿದ್ದು ಎಲ್ಲಾ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಳಪೆ ಮಟ್ಟದ ಪೈಪುಗಳನ್ನು ಸರಬರಾಜು ಮಾಡಿ, ಸರ್ಕರಕ್ಕೆ ಮತ್ತು ಫಲಾನುಭವಿ ರೈತರುಗಳಿಗೆ ಮೋಸ ಮಾಡಿ ರೈತರಿಗೆ ಪಂಗನಾಮ ಹಾಕಿರುತ್ತಾರೆ ಎಂದು ಬಸವರಾಜ ಬಾಗಲವಾಡ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು ಕೃಷಿ ಇಲಾಖೆಯಿಂದ ನೀಡಿದ ಈ ಪೈಪ್‌ಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಆದ್ದರಿಂದ ಇವರಿಗೆ ಸಂದಾಯವಾಗಬೇಕಾದ ಬಿಲ್ಲನ್ನು ತಡೆ ಹಿಡಿದು ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮಾನವಿ ಇವರಿಗೆ ಎಪ್ರಿಲ್ ೨೯ ದೂರು ನೀಡಿದ್ದರು ಯಾವುದೇ ಕ್ರಮ ಕೈಗೋಳ್ಳದೇ ಇದ್ದದ್ದುರಿಂದ ಮೆಲ್ನೋಟಕ್ಕೆ ಅಧಿಕಾರಿಗಳು ಈ ಭ್ರಷ್ಟಚಾರದಲ್ಲಿ ಭಾಗಿಯಾಗಿ ಟೆಂಡರದಾರರ ಜೊತೆ ಶಾಮಿಲಾಗಿದ್ದು ಇಂತಹ ಅಧಿಕಾರಿಗಳ ವಿರುದ್ಧ ೯೮ ದಿನದಗೊಳಗಾಗಿ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು. ಹಾಗೂ ಒಂದು ವೇಳೆ ನಿರ್ಲಕ್ಷ್ಯ ಧೋರಣೆ ವಹಿಸಿದ್ದಲ್ಲಿ ಹಿರೇಕೊಟ್ಟೇಕಲ್ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರಮೇಶ ಉಪ್ಪಾರ, ಲಕ್ಷ್ಮಣ್ ಜಾಲವಾಡಿಗಿ, ಬಸವರಾಜ ಬಾಗಲವಾಡ, ಜಯರಾಜ ಕೊಡ್ಲಿ, ಸ್ಯಾಮಸಿಂಗ್, ಮೌನೇಶ ನಾಯಕ, ವಿರೇಶ ನಾಯಕ, ಬಸವರಾಜ ಸುಗುನೂರು ಸೇರಿದಂತೆ ಅನೇಕರು ಇದ್ದರು.