ಹಿರೇಕೆರೆಗೆ ಸಂತೋಷ್ ಬಾಗಿನ

ಅರಸೀಕೆರೆ, ನ. ೧೩- ತಾಲ್ಲೂಕಿನ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಹಿರೇಕೆರೆಗೆ ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಬಾಗಿನ ಅರ್ಪಿಸಿದರು.
ಕಳೆದ ೧೩ ವರ್ಷಗಳಿಂದ ಕೆರೆ ಬರಿದಾಗಿತ್ತು. ಈ ಬಾರಿ ಉತ್ತಮ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಹರಿದಿದೆ. ಊರಿನ ಗ್ರಾಮಸ್ಥರು, ಹಿರಿಯರು, ಸಂತೋಷದಿಂದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.