ಹಿರೇಕಲ್ಮಠದ ಅಭಿವೃದ್ದಿಗೆ ಒಂದು ಕೋಟಿ ಹಣ ಬಿಡುಗಡೆ

ಹೊನ್ನಾಳಿ.ಮಾ.೨೭ : ರಾಜ್ಯ ಸರ್ಕಾರ ಹಿರೇಕಲ್ಮಠದ ಅಭಿವೃದ್ದಿಗೆ ಒಂದು ಕೋಟಿ ಹಣ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲಿ ಮತ್ತಷ್ಟು ಅನುದಾನ ಬಿಡುಗಡೆ ಮಾಡಿಸುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮಿಗಳ 51ನೇ ವಾರ್ಷಿಕ ಪುಣ್ಯರಾಧನೆ,ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 6ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ನವೋದ್ಯಮ ಕಾರ್ಯಗಾರ 2021 ದತ್ತಿ ಉಪನ್ಯಾಸ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೊನ್ನಾಳಿ ತಾಲೂಕಿಗೆ 2.70 ಲಕ್ಷ ಮಂಜೂರು ಮಾಡಿದ್ದಾರೆ. ಹೊಟ್ಯಾಪುರ ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದರು.ಹಿರೇಮಠದಲ್ಲಿ ಕೃಷಿ ಕಾಲೇಜು ಆರಂಭಿಸ ಬೇಕೆಂಬುದು ಶ್ರೀಗಳ ಆಸೆಯಾಗಿದ್ದು ಇದಕ್ಕೆ ಸಂಭಂದ ಪಟ್ಟಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ಕೂಡ ನಡೆಸಲಾಗಿದೆ. ಈಗಾಗಲೇ ಸರ್ಕಾರದಿಂದ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದು, ಕೆಲ ತಾಂತ್ರಿಕ ತೊಂದರೆಯಿಂದ ವಿಳಂಭವಾಗಿದ್ದು ಆದಷ್ಟು ಬೇಗ ಕೃಷಿ ಕಾಲೇಜು ಮಂಜೂರು ಮಾಡಿಸುವುದಾಗಿ ತಿಳಿಸಿದರು.ಐತಿಹಾಸಿಕ ಕೃಷಿ ಮೇಳವನ್ನು ಹೊನ್ನಾಳಿಯಲ್ಲಿ ಮಾಡಿದ್ದು, ಪಂಚರಾಜ್ಯಗಳ ಕೃಷಿ ಮೇಳವನ್ನು ಮಾಡ ಬೇಕೆಂದು ಗುರುಗಳ ಆಪೇಕ್ಷೆ ಇದೇ. ಆದರೇ ಕೊರೊನಾದಿಂದಾಗಿ ಈ ಬಾರೀ ಕೃಷಿ ಮೇಳ ಮಾಡುವುದು ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದ್ದು ಮುಂದಿನ ವರ್ಷ ಕೋವಿಡ್ ನಿಂದ ಮುಕ್ತರಾಗಿ ಅತ್ಯಂತ ದೊಡ್ಡ ಕಾರ್ಯಕ್ರಮ ಮಾಡೋವುದಾಗಿ ಶ್ರೀಗಳಲ್ಲಿ ಮನವಿ ಮಾಡಿದರು.ಇನ್ನು ಕೊವಿಡ್ ಎರಡನೇ ಅಲೆ ರಾಜ್ಯದಲ್ಲೇ ದಿನೇ ದಿನೇ ಹೆಚ್ಚುತ್ತಿದ್ದು ಜನರು ಕೊರೊನಾದಿಂದ ಜಾಗೃತರಾಗಿರುವಂತೆ ಮನವಿ ಮಾಡಿದರು.ಇದೇ ವೇಳೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಶ್ರೀ ಮಠವು ಜ್ಞಾನ ದಾಸೋಹದ ಜೊತೆಗೆ ಕಲೆ ಸಂಸ್ಖೃತಿಗೆ ಹೆಚ್ಚಿನ ಒತ್ತು ನೀಡುತ್ತಾ ಬರುತ್ತಿದೆ ಎಂದರು. ಪ್ರತಿವರ್ಷ ಮಠದಲ್ಲಿ ಸರಳ ವಿವಾಹ ಮಠದಲ್ಲಿ ಮಾಡುತ್ತಿದ್ದು ಪ್ರತಿವರ್ಷ ಮಠದಲ್ಲಿ ಪಾಲ್ಗೊಳ್ಳುತ್ತಿದ್ದೇನೆಂದರು. ಕೊರೊನಾ ಇರುವ ಕಾರಣ ಹೆಚ್ಚು ಜನ ಸೇರ ಬಾರದೆಂದು ಸರ್ಕಾರದ ಸುತ್ತೋಲೇ ಇರುವುದರಿಂದ ಸರಳವಾಗಿ ಕಾರ್ಯಕ್ರಮವನ್ನ ಮಠದಿಂದ ಮಾಡಲಾಗುತ್ತಿದೆ ಎಂದ ಸಂಸದರು ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಕೊರೊನಾದಿಂದ ಜಾಗೃತಿರಾಗ ಬೇಕು, ಇಲ್ಲದೇ ಇದ್ದರೇ ಕುಟುಂಬಸ್ಥರು ಸಾಕಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆಂದು ಕಿವಿ ಮಾತು ಹೇಳಿದರು. ಇಂದು ಎಂಟು ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದು ದಂಪತಿಗಳು ಪೋಷಕರನ್ನು ಚೆನ್ನಾಗಿ ನೋಡಿ ಕೊಳ್ಳುವಂತೆ ಸಲಹೆ ನೀಡಿದರಲ್ಲದೇ ಹೆಂಡತಿ ಮಾತು ಕೇಳಿ ಗಂಡದ್ದಿರು ಪೋಷಕರನ್ನು ವೃದ್ದಾಶ್ರಮಕ್ಕೆ ಕಳುಹಿಸಬೇಡಿ, ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಆ ಮಗುವನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದರು.ದಿವ್ಯಸಾನಿಧ್ಯವನ್ನು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿದ್ದರು. ಈ ಸಂದರ್ಭ ಶಿವಕುಮಾರ ಹಾಲಸ್ವಾಮಿಗಳು ಬೃಹನ್ಮಠ ರಾಂಪುರ, ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಗೌರಿಮಠ ಕರ್ಜಗಿ ಹಾವೇರಿ ಜಿಲ್ಲೆ ಸೇರಿದಂತೆ ಮತ್ತೀತರಿದ್ದರು.