ಹಿರೆಮಠಗೆ ಪ್ರಶಸ್ತಿ

ಸವಣೂರ,ಜ13: ಬೆಂಗಳೂರಿನ ವೈದಿಕ ಚಾರಿಟೇಬಲ್ ಟ್ರಸ್ಟ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸಹಯೋಗದಲ್ಲಿ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಸವಣೂರ ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ವೇ. ಮೂ ಇಂದೂಧರ ಹಿರೇಮಠ ಅವರಿಗೆ ಒಲಿದು ಬಂದಿದೆ.
ಬೆಂಗಳೂರಿನಲ್ಲಿ ಜ. 16 ರಿಂದ 18 ರವರೆಗೆ ನಡೆಯುವ ರಾಷ್ಟ್ರೀಯ ಮಟ್ಟದ ವೀರಶೈವ ಲಿಂಗಾಯತ ಆರ್ಚಕ ಪುರೋಹಿತರಿಗಾಗಿ ನೂತನ ಗೃಹ ಪ್ರವೇಶ ಪ್ರಾಯೋಗಿಕ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಸಾಂಸ್ಕøತಿಕ ವಿಶ್ವ ವಿದ್ಯಾಲಯದ ಉಪಕುಲಪತಿ ಮತ್ತು ನಿರ್ದೇಶಕರಾದ ಡಾ. ಪ್ರಕಾಶ ಅರಗ ಪಾಗೋಜಿ, ಬಿ.ಎಸ್.ಪರಮಶಿವಯ್ಯ ಪ್ರಶಸ್ತಿಯನ್ನು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.