
ತಾಳಿಕೋಟೆ:ಆ.3:ತಾಲೂಕಿನ ಹಿರೂರ ಗ್ರಾಮ ಪಂಚಾಯತ ಎರಡನೇ ಅವಧಿಗಾಗಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಶಾರದಾ ಹಾದಿಮನಿ ಆಯ್ಕೆಯಾದರು.
ಬುಧವಾರ ನಡೆದ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ, ಹಿಂದುಳಿದ ಬ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಬಿರಾದಾರ ಹಾಗೂ ರಾಮನಗೌಡ ಚೌದ್ರಿ ನಾಮ ಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಾಗ ಸುರೇಶ ಬಿರಾದಾರ ಅವರು 10 ಮತಗಳು ಪಡೆದುಕೊಂಡರೆ ರಾಮನಗೌಡ ಚೌದ್ರಿ ಅವರಿಗೆ 9 ಮತಗಳು ಪಡೆದರು. ಹೀಗಾಗಿ ಸುರೇಶ ಬಿರಾದಾರ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾದ್ಯಕ್ಷ ಸ್ಥಾನಕ್ಕೆ ನೀಲಮ್ಮ ಬಿರಾದಾರ ಮತ್ತು ಶಾರದಾ ಹಾದಿಮನಿ ನಾಮಪತ್ರ ಸಲ್ಲಿಸಿದರು. ಶಾರದಾ ಅವರು 10 ಮತಗಳನ್ನು ಪಡೆದುಕೊಂಡರೆ ಹಾಗೂ ನೀಲಮ್ಮ ಅವರು 9 ಮತಗಳನ್ನು ಪಡೆದುಕೊಂಡರು ಹೀಗಾಗಿ ಶಾರದಾ ಹಾದಿಮನಿ ಉಪಾದ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಶಚಂದ್ರ ಟಾಕಳೆ, ಸಹಾಕರಾಗಿ ಪಿಡಿಓ ಸಿ.ಎಸ್.ಮಠ, ಕಾರ್ಯದರ್ಶಿ ಎ.ಎಚ್.ಬಿರಾದಾರ ಕಾರ್ಯನಿರ್ವಹಿಸಿದರು.
ಈ ಸಮಯದಲ್ಲಿ ನೂತನ ಅಧ್ಯಕ್ಷ ಸುರೇಶ ಮತ್ತು ಉಪಾಧ್ಯಕ್ಷೆ ಶ್ರೀಮತಿ ಶಾರದಾ ಅವರು ಮುಖಂರುಗಳಾದ ಬಸನಗೌಡ ಬಗಲಿ, ಚಂದ್ರಶೇಖರ ಕನಕರೆಡ್ಡಿ, ವಿಶ್ವನಾಥ ಚಲವಾದಿ, ಬಸವರಾಜ ಬಡಿಗೇರ, ಚಂದ್ರಶೇಖರ ಸಾಸನೂರ, ಸಿದ್ದನಗೌಡ ಅಂಗಡಗೇರಿ, ಶ್ರೀಶೈಲ ಚೌದ್ರಿ, ಮಲ್ಲು ನಾಟಿಕಾರ, ಸಂತೋಷ ದೊಡಮನಿ, ನಾನಾಗೌಡ ಹೊಸಹಳ್ಳಿ, ಬಸನಗೌಡ ಕುಂಠರೆಡ್ಡಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.