ಹಿರಿಯ ಸಾಹಿತಿ ದಿ, ಕಾ ಹು ಬಿಜಾಪುರವರಿಗೆ ನುಡಿನಮನ

ಮುದ್ದೇಬಿಹಾಳ :ಸೆ.6: ತನ್ನ ಸಾಹಿತ್ಯದ ಮುಖಾಂತರ ಕಾ, ಹು, ಬಿಜಾಪುರ ಸಮಾಜದಲ್ಲಿ ಸಾಹಿತ್ಯದ ಪಕೀರ್ ಎಂದು ಗುರುತಿಸಿಕೊಂಡಿದ್ದವರು, ಇಂತಹ ಮೇರು ಸಾಹಿತ್ಯದ ಗುಮ್ಮಟವನ್ನು ಕಳೆದುಕೊಂಡು ಇಂದು ನಮ್ಮ ಬಸವಭೂಮಿ ಅನಾಥವಾಗಿದೆ, ಮೇರು ಸಾಹಿತಿಯಾಗಿ, ಕೃಷಿಕರಾಗಿ ಶಿಕ್ಷಣ ಸಂಸ್ಥೇಗಳ ಪೋಷಕರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದರು, ಅವರ ಅಗಲಿಕೆ ವಿಶೇಷವಾಗಿ ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರುನಾಡು ಸಾಹಿತ್ಯ ಪರಿಷತ್ತಿನ ತಾಲೂಕಾ ಗೌರವ ಅಧ್ಯಕ್ಷ ಎಮ್ ಬಿ ನಾವದಗಿ ಹೇಳಿದರು.
ಪಟ್ಟಣದ ವ್ಹಿಬಿಸಿ ಪ್ರೌಡ ಶಾಲೆಯಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ದಿ, ವೀರಶೈವ ವಿಧ್ಯಾವರ್ಧಕ ಅಶೋಷಿಯನ್ ಸಂಯೋಗದಲ್ಲಿ ಅಗಲಿದ ಹಿರಿಯ ಸಾಹಿತಿ ದಿ, ಕಾ ಹು ಬಿಜಾಪುರವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿನ ಬಾವೈಕ್ಯತೆಗಾಗಿ ಸಾಕಷ್ಟು ಶ್ರಮವಹಿಸಿದ್ದ ಇವರು ಮಸೀದಿಯೊಂದರ ಉದ್ಘಾಟನೆಯನ್ನು ಮಾಡಲು ಸ್ವಾಮೀಜಿಯನ್ನು ಕರೆತಂದಿದ್ದು ಅವರ ವ್ಯಕ್ತಿತ್ವವನ್ನು ಎತ್ತಿ ತೊರಿಸುತ್ತದೆ ಎಂದರು.
ಇದೇ ವೇಳೆ ಪರಿಷತ್ತಿನ ಜಿಲ್ಲಾದ್ಯಕ್ಷ ಅಸ್ಲಮ್ ಶೇಖ್ ಮಾತನಾಡಿ ನಾವು ಇಂದು ನಮ್ಮ ಬಾಗದ ಜಾನಪದ ಸಾಹಿತ್ಯದ ದಿಗ್ಗಜರನ್ನು ಕಳೆದುಕೊಂಡಿದ್ದೇವೆ, ಸಾಹಿತ್ಯದ ಕಣಜವನ್ನು ಹೊಂದಿದ್ದ ಕಾ ಹು ಬಿಜಾಪುರರವರಿಗೆ ಅವರೆ ಸಾಟಿ, ನಮ್ಮ ಪರಿಷತ್ತಿನ ಗೌರವ ಜಿಲ್ಲಾದ್ಯಕ್ಷರಾಗಿದ್ದ ಅಜ್ಜನ ನೆನಪು ಇಂದು ಶಾಸ್ವತವಾಗಲಿದೆ, ಹಲವಾರು ನಾಟಕ, ಜಾನಪದ ಹಾಡುಗಳನ್ನು,ಕವನ ಸಂಕಲನವನ್ನು ಮತ್ತು ಕೃಷಿಕರಾದ ಇವರು ಕೃಷಿಯ ಜೊತೆಗೆ ಆಶೋಕ ಚಕ್ರ ಎನ್ನುವ ನಾಟಕವನ್ನು ರಚಿಸಿ ತಮ್ಮದೇ ಚಾಪು ಮೂಡಿಸಿದ್ದರು, ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಅನೇಕ ಪುರಸ್ಕಾರಗಳು ಮನೆ ಬಾಗಲಿಗೆ ಬಂದಿದ್ದವು, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೇಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಅಗಲಿಕೆ ಕನ್ನಡ ಸಾರತ್ವ ಲೊಕಕ್ಕೆ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಕರುನಾಡು ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಹಾಗೂ ಸಾಹಿತಿ ಎಚ್ ಆರ್ ಬಾಗವಾನ, ದಲಿತ ಸಾಹಿತಿ ಶಿವಪುತ್ರ ಅಜಮನಿ, ಅಬ್ದುಲ್ ರಹಿಮಾನ ಬಿದರಕುಂದಿ ಮಾತನಾಡಿದರು. ಪರಿಷತ್ತಿನ ಉಪಧ್ಯಕ್ಷರಾದ ಎಸ್ ಎ ಬೇವಿನಗಿಡದ, ಸಲಹೆಗಾರರಾದ ಜೆ ಡಿ ಮುಲ್ಲಾ, ಕಾರ್ಯದರ್ಶಿ ಅಶ್ವಿನಿ ಬಿರಾದಾರ, ದೀಪಾರತ್ನಶ್ರೀ, ಎ ಎ ಬಾಗವಾನ, ಎನ್ ಬಿ ನಾಗರಾಳ, ಶಾಲಾ ಶಿಕ್ಷಕರು ವಿಧ್ಯಾರ್ಥಿಗಳು ಇದ್ದರು.