ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಧಾನ್ಯಗಳ ಪರಿಶೀಲನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೯; ಜಿಲ್ಲೆಯ ಮಾಜಿ ಸಚಿವರು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಹಿರಿಯ ಶಾಸಕರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರು ಮಾರುಕಟ್ಟೆಯಲ್ಲಿ ಧಾನ್ಯಗಳ ಪರಿಶೀಲನೆ ನಡೆಸಿದರು. ಕಳಪೆ ಧಾನ್ಯಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎನ್ನಲಾಗಿತ್ತು. ಈ ಹಿನ್ನಲೆ ಇಲ್ಲಿನ ಚೌಕಿಪೇಟೆಯಲ್ಲಿ ಆಹಾರ‌ ಧಾನ್ಯಗಳ‌ ಗುಣಮಟ್ಟ ಪರಿಶೀಲನೆ ನಡೆಸಿದರು. ಚೌಕಿಪೇಟೆಯಲ್ಲಿ ಧಾನ್ಯಗಳ ಮಾರಾಟಗಾರರು ಶಾಸಕರಿಗೆ ಧಾನ್ಯಗಳನ್ನು ನೀಡಿ ಪರೀಕ್ಷೆಗೆ ಒಳಪಡಿಸಿದ್ದು ಕಂಡು ಬಂತು. ಉತ್ತಮ ಗುಣ ಮಟ್ಟದ ಧ್ಯಾನ್ಯಗಳನ್ನು ಮಾರಾಟ ಮಾಡುವಂತೆ ಅಂಗಡಿಗಳಲ್ಲಿ ಮಾರಾಟಗಾರರಿಗೆ ಶಾಸಕರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಧ್ಯಾನಗಳ ಮಾರಾಟಗಾರರು ಇದ್ದರು.