ದಾವಣಗೆರೆ.ಸೆ.29; ಮಧ್ಯಕರ್ನಾಟಕದ ಹೃದಯ ಆಸ್ಪತ್ರೆ, ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ದಾವಣಗೆರೆ ನಗರದ ಹಿರಿಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಡಾ.ಎ.ಪಿ ತಿಪ್ಪೇಸ್ವಾಮಿ, ಡಾ.ಪಿ.ಎಂ ಉಪಾಸಿ,ಡಾ.ಎಸ್ ಆರ್ ಮರಳಿಹಳ್ಳಿ,ಡಾ.ಜಿ.ಶಿವಲಿಂಗಪ್ಪ,ಡಾ.ಎಂ.ಎಲ್ ಕುಲಕರ್ಣಿ ಮತ್ತಿತರರಿದ್ದರು.