ಹಿರಿಯ, ವಿಕಲಚೇತನರಿಗೆ ಮತದಾನ ಮಾಡಲು ಮನವಿ


ಸಂಜೆವಾಣಿ ವಾರ್ತೆ
ಗದಗ, ಎಪ್ರಿಲ 25 : ಲೋಕಸಭಾ ಚುನಾವಣೆ ಸಂಬಂಧ ಗದಗ ಜಿಲ್ಲೆಯಲ್ಲಿ ‌85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ಹಾಗೂ ವಿಕಲಚೇತನರು ತಮ್ಮ ಮನೆಯಿಂದಲೇ 2024 ರ
ಏಪ್ರಿಲ್  26 ರಿಂದ 28 ರ ವರೆಗೆ
ಮತದಾನ ಮಾಡಬಹುದಾಗಿದೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 ಮನೆಯಿಂದಲೇ ಮತದಾನಕ್ಕೆ ಅವಕಾಶಕ್ಕೆ ಅರ್ಜಿ ಸಲ್ಲಿಸಿರುವ ಮತದಾರರು ತಾವು ನೀಡಿದ ವಿಳಾಸದ ಮನೆಯಲ್ಲಿಯೇ ಹಾಜರಿದ್ದು, ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಕೋರಿದ್ದಾರೆ.