ಹಿರಿಯ ವನಿತೆಯರ ಆನಂದಧಾಮಕ್ಕೆ ನೂತನ ಸಮಿತಿ ರಚನೆ

ದಾವಣಗೆರೆ,ಏ.19;- ನಗರದ ವನಿತಾ ಸಮಾಜ ನಡೆಸುತ್ತಿರುವ `ಆಶ್ರಯ’ ಹಿರಿಯ ವನಿತೆಯರ ಆನಂದಧಾಮಕ್ಕೆ ನೂತನ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳನ್ನು ಗೌರವಾಧ್ಯಕ್ಷರಾದ ಡಾ. ಸಿ. ನಾಗಮ್ಮ ಕೇಶವಮೂರ್ತಿ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.ಆಶ್ರಯ ಹಿರಿಯ ವನಿತೆಯರ ಆನಂದಧಾಮದ ಅಧ್ಯಕ್ಷರಾಗಿ ಶ್ರೀಮತಿ ಸುನಿತಾ ವೀರನಾರಾಯಣ, ಕಾರ್ಯದರ್ಶಿಯಾಗಿ ಟಿ.ಎಸ್. ಶೈಲಜಾ, ಖಜಾಂಚಿಯಾಗಿ ಸುಷ್ಮಾ ವೇಣುಗೋಪಾಲ್, ಆರೋಗ್ಯ ಸಮಿತಿ ಛರ‍್ಮನ್‌ರಾಗಿ ಡಾ.ರಶ್ಮಿ ಸುಬೋಧ್ ಶೆಟ್ಟಿ ಹಾಗೂ ಸದಸ್ಯರಾಗಿ ಸುಷ್ಮಾ ಮೋಹನ್, ಸುಧಾ ಪ್ರಸಾದ್ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.