(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಇಂದು ಬೆಳಿಗ್ಗೆ ಕರ್ನಾಟಕ ಇತಿಹಾಸ ಅಕಾಡಮಿ ವತಿಯಿಂದ ಹಿರಿಯ ರಂಗ ಚೇತನ ೭೭ ವರ್ಷದ ಜಿ. ಚನ್ನಬಸಪ್ಪ ಇವರನ್ನು ಜಿಲ್ಲಾ ಅಧ್ಯಕ್ಷ ರಾದ ಟಿ.ಹೆಚ್.ಎಂ. ಬಸವರಾಜ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚನ್ನಬಸಪ್ಪ ನವರು ವೃತ್ತಿ ಯಲ್ಲಿ ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಮಾಡಿ ಕಳೆದ ೫೦ ವರ್ಷಗಳಿಂದ ಸಾಮಾಜಿಕ ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಅದರಲ್ಲೂ ವಿಶೇಷವಾಗಿ ಶ್ರಿ ಕೃಷ್ಣನ ಪಾತ್ರವನ್ನು ಬಹಳ ರೋಚಕವಾಗಿ ಅಭಿನಯಿಸಿದ್ದಾರೆ.ಇವರ ಕೃಷ್ಣನ ಹಾಡುಗಳನ್ನು ಕೇಳುವುದೇ ಆನಂದ. ಈಗಲೂ ಅವರನ್ನು ಕೃಷ್ಣ ಎಂದೇ ಕರೆಯುತ್ತಾರೆ. ಇಂತಹ ಹಿರಿಯ ಕಲಾವಿದರನ್ನು ಸರ್ಕಾರ ಗುರುತಿಸದೇ ಇರುವುದು ವಿಷಾದನೀಯ ಎಂದರು. ಈ ಸಂದರ್ಭದಲ್ಲಿ ಕಲಾಭಿಮಾನಿಗಳಾದ ಶಿವ, ಅಖಿಲೇಶ್, ಭವ್ಯ, ತನುಜಾ, ನಿರಂಜನ್,ಮೋಹನ್, ಆಚುತ್, ತಿಪ್ಪೇಸ್ವಾಮಿ, ಶೇಷಾದ್ರಿ,ಮುದ್ದಸ್ಸಿರ್, ವಾಸಿಂ ಮುಂತಾದವರು ಉಪಸ್ಥಿತರಿದ್ದರು.