ಹಿರಿಯ ರಂಗಕರ್ಮಿ‌ ಡಾ.ಟಿ.ಬಿ.‌ ಸೊಲಬಕ್ಕನವರ ನಿಧನ

ಬಳ್ಳಾರಿ:ನ.19- ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ಬಳಿಯಿರುವ ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ಹಿರಿಯ ರಂಗಕರ್ಮಿ ಡಾ. ಟಿ.ಬಿ. ಸೊಲಬಕ್ಕನವರ ಇಂದು ನಿಧನರಾಗಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ವಿಶ್ವಶಾಂತಿ ಸಂದೇಶ ಸಾರುವ 140 ಅಡಿ ಉದ್ದದ ಸಾಮರಸ್ಯ ವರ್ಣಚಿತ್ರ ರಚಿಸಿ ವಿಶ್ವವಿಖ್ಯಾತಿಯನ್ನು ಪಡೆದಿದ್ದ ಡಾ. ಟಿ.ಬಿ. ಸೊಲಬಕ್ಕನವರ ದೇಶಾದ್ಯಂತ ಹಲವಾರು ಜನಪದ ಉದ್ಯಾನ ರಚಿಸುವ ಮೂಲಕ ಪ್ರವಾಸೋದ್ಯಮಕ್ಕೆ ಶಿಲ್ಪರೂಪ ನೀಡಿದ್ದರು.
ಜಾನಪದ ವಿಶ್ವವಿದ್ಯಾಲಯ ಸೊಲಬಕ್ಕನವರ ಅವರಿಗೆ 2018 ರಲ್ಲಿ ಗೌರವ ಡಾಕ್ಟರೇಟ್ ಗೌರವಿಸಿತ್ತು.