ಹಿರಿಯ ಪತ್ರಕರ್ತ ರವಿ ಬೆಳಗೆರೆಗೆ ಶ್ರದ್ದಾಂಜಲಿ


ಹರಪನಹಳ್ಳಿ.ನ.೧೫; ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಪಟ್ಟಣದ ಪ್ರವಾಸಿ ಮಂದಿರ ಅವರಣದಲ್ಲಿ ಬೀಚಿ ಅಭಿಮಾನಿಗಳ ಬಳಗದವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬೀಚಿ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಕಣವಿಹಳ್ಳಿ ಮಂಜುನಾಥ ಮಾತನಾಡಿ, ರವಿ ಬೆಳಗೆರೆ ಅಗಲಿಕೆ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ನಿರ್ಭಯವಾಗಿ ಬರೆಯುತ್ತಿದ್ದ ಅವರ ಬರವಣಿಗೆ ಅನೇಕರಿಗೆ ಪ್ರರಣೆ ಆಗಿತ್ತು. ಲೇಖಕ, ಕಾದಂಬರಿಕಾರ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದ ಅವರ ಅಗಲಿಗೆ ತೀವ್ರ ಬೇಸರ ತರಿಸಿದೆ ಎಂದರು ಹೇಳಿದರು.
ಪ್ರಗತಿಪರ ಸಂಘಟನೆ ಮುಖಂಡ ಅಲಗಿಲವಾಡ ಎ.ಎಂ.ವಿಶ್ವನಾಥ ಮಾತನಾಡಿ, ರವಿ ಬೆಳಗೆರೆಗೂ ಹರಪನಹಳ್ಳಿಗೂ ಅವಿನಾವಭಾವ ಸಂಬಂದವಿತ್ತು. ನಕಲಿ ಚಿನ್ನದ ರಹಸ್ಯ ಬೇಧಿಸಲು ಹರಪನಹಳ್ಳಿಗೆ ಆಗಮಿಸಿ ಆರೋಪಿತರ ಮೇಲೆ ಫೈರಿಂಗ್ ಕೂಡ ನಡೆಸಿದ್ದರು. ಅವರ ಜೊತೆಗೆ ಒಡನಾಟ ಹೊಂದಿದ್ದ ನಾವುಗಳು ಪ್ರಕರಣ ಮುಗಿಯುವವರೆಗೂ ಜೊತೆಗಿರುವಂತಹ ಭಾಗ್ಯ ನಮ್ಮದಾಗಿತ್ತು, ದೈತ್ಯ ಪ್ರತಿಭೆ ಅಗಲಿರುವುದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಕುಮಾರ್ ಪುಣಬಗಟ್ಟಿ, ಹಿರಿಯ ಪತ್ರಕರ್ತ ಹುಣಸಿಹಳ್ಳಿ ಕೋಟ್ರಪ್ಪ, ಬೀಚಿ ಅಭಿಮಾನಿ ಬಳಗದ ಅಧ್ಯಕ್ಷ ಶೃಂಗಾರದೋಟ ನಿಂಗರಾಜ್, ಮಾದಿಗ ಮಹಾಸಭಾ ಅಧ್ಯಕ್ಷ ಪೂಜಾರ ಉಚ್ಚೆಂಗೆಪ್ಪ, ಪತ್ರಕರ್ತರ ಸಂಘದ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಸ್.ಎನ್.ಸತೀಶಕುಮಾರ್, ಮುಖಂಡರಾದ ಹಿರೇಮೇಗಳಗೆರೆ ಮಂಜುನಾಥ, ರೆಡ್ಡಿಸಿದ್ದಪ್ಪ, ನೆರೆತಲೆ ಇಂದ್ರಪ್ಪ, ಚಾರ್ರೆಪ್ಪ ಇತರರಿದ್ದರು.