ಹಿರಿಯ ಪತ್ರಕರ್ತ ಮುರಳಿ ವಿಧಿವಶ

ಹುಣಸೂರು,ನ.15:- ನಗರದ ಹಿರಿಯ ಪತ್ರಕರ್ತ, ಮೈಸೂರು ಮಿತ್ರ ವರದಿಗಾರ ಹೆಚ್.ಎಸ್.ಮುರಳಿಧರ್ (66) ವರ್ಷ, ಇಂದು ಬೆಳ್ಳಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದೈವಾಧಿನರಾಗಿದ್ದಾರೆ.
ಪತ್ನಿ, ಪುತ್ರ ಹಾಗೂ ಪುತ್ರಿ ಹಾಗೂ ಅಪಾರ ಬಂಧು-ಬಳಗ, ಸ್ನೇಹಿತ ವೃಂದವನ್ನು ಹೊಂದಿದ ಮುರಳಿಧರ್ ಪೌರೋಹಿತ್ಯಕುಟುಂಬದಲ್ಲಿ ಜನಿಸಿದರೂ, ಪತ್ರಿಕಾಕ್ಷೇತ್ರಕ್ಕೆ ಕಾಲಿಟ್ಟು ಸತತ 50ಕ್ಕೂ ಹೆಚ್ಚು ವರ್ಷ ಪತ್ರಿಕಾ ವೃತಿಯಲ್ಲೆ ಕಳೆದ ಇವರು ಮೈಸೂರು ಮಿತ್ರ ಮುರಳಿ ಎಂದೆ ಜನರಲ್ಲಿ ಗುರುತಿಸಿಕೊಂಡವರು.
ತಾಲ್ಲೂಕಿನ ಬಹುತೇಕ ಎಲ್ಲ ಜನಪ್ರತಿನಿಧಿಗಳ, ಉದ್ಯಮಿಗಳ ಬೆಳವಣಿಗೆಯಲ್ಲಿ ಮುರಳಿರವರ ಪಾತ್ರ ಅನನ್ಯ. ತಾಲ್ಲೂಕು ಪತ್ರಕರ್ತರ ಸಂಘದಲ್ಲಿ ವಿವಿಧ ಹುದ್ದೆ ಅಲಕಂರಿಸಿದ ಇವರ ವರದಿಗಾರಿಕೆಯಲ್ಲಿ ಯಾವಗಲೂ ನೈಜ್ಯ ಹಾಗೂ ದಿಟ್ಟತೆಕಾಣುತ್ತಿತ್ತು.
ದಿವಂಗತ ದೇವರಾಜು ಅರಸು ಕಾಲದಲ್ಲಿ ವಲಸೆ ಬಂದು ತಾಲ್ಲೂಕಿನ ಗುರುಪುರದಲ್ಲಿ ಬೀಡುಬಿಟ್ಟಟಿಬೇಟಿಯನ್ನರ ನೋವು-ನಲಿವು, ಸಂಕಷ್ಟಗಳ ಬಗ್ಗೆ ಅಂದೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿ ಮಾಡುವ ಮೂಲಕ ಅವರ ನೂವಿಗೆ ಸ್ಪಂದಿಸಿದರು.
ಮುರಳಿಧರ್‍ರ ಸೇವೆ ಕಂಡು ಟಿಬೇಟ್ ಧರ್ಮಗುರು ದಲೈಲಾಮ ಪ್ರತಿ ವರ್ಷ ಹುಣಸೂರಿಗೆ ಬಂದಾಗ ಮುರಳಿರವರನ್ನು ಕರೆದು ಸತ್ಕರಿಸಿದುಂಟು.
ಪತ್ರಿಕಾಕ್ಷೇತ್ರದೊಂದಿಗೆ ಪೌರೋಹಿತ್ಯ ಮಾಡುತ್ತಿದ ಇವರು ನಗರದ ಗಣೇಶನ ಗುಡಿಯ ಅರ್ಚಕರಾಗಿಯೂ ಹಲವು ದಶಕ ಸೇವೆ ಸಲ್ಲಿಸಿದ್ದಾರೆ.