ಹಿರಿಯ ಪತ್ರಕರ್ತ ಮಾರುತಿ ಸೋನಾರ್‍ಗೆ ಒಲಿದ ಸೀನಿಯರ್ ಫೆಲೋಶಿಪ್ ಪ್ರಶಸ್ತಿ

ಬೀದರ: ಜೂ.28:ಕೇಂದ್ರ ಸರಕಾರದ ಸಂಸ್ಕøತಿ ಮಂತ್ರಾಲಯದ ಆಧೀನದಲ್ಲಿರುವ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸ್ ಆ್ಯಂಡ್ ಟ್ರೈನಿಂಗ್ (ಸಿಸಿಆರ್‍ಟಿ-ನವದೆಹಲಿ) ಸಂಸ್ಥೆಯ ವತಿಯಿಂದ 2020-21 ನೇ ಸಾಲಿನ ಸೀನಿಯರ್ ಫೆಲೋಶಿಪ್ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮಾರುತಿ ಸೋನಾರ್ ಆಯ್ಕೆಯಾಗಿದ್ದಾರೆ. “ಕಲ್ಯಾಣ ಕರ್ನಾಟಕದ ಜಾನಪದ ನೃತ್ಯಗಳು” ವಿಷಯದ ಮೇಲೆ ಸೀನಿಯರ್ ಫೆಲೋಶಿಪ್ ಪ್ರಶಸ್ತಿ ಪಡೆದ ಕರ್ನಾಟಕ ಏಕೈಕ ವ್ಯಕ್ತಿ ಮಾರುತಿ ಸೋನಾರ್ ಆಗಿದ್ದಾರೆ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸಾಂಪ್ರದಾಯಿಕ ಕಲೆಗಳಲ್ಲಿ ಕಲ್ಯಾಣ ಕರ್ನಾಟಕ ಜಾನಪದ ನೃತ್ಯಗಳು” ಒಂದು ಸಾಂಸ್ಕøತಿಕ ಅಧ್ಯಯನ ಕುರಿತಾದ ಅಧ್ಯಯನಕ್ಕಾಗಿ ಈ ಫೆಲೋಶಿಪ್ ಪ್ರಶಸ್ತಿ ನೀಡಲಾಗಿದೆ. ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸುತ್ತಿರುವ ಕೇಂದ್ರ ಸರ್ಕಾರದ ಸಿಸಿಆರ್‍ಟಿ ಸಂಸ್ಥೆಯು ಪ್ರತೀ ವರ್ಷ ಅರ್ಹ ಸಾಧಕರನ್ನು ಈ ಸೀನಿಯರ್ ಫೆಲೋಶಿಪ್ ಪ್ರಶಸ್ತಿ ನೀಡುತ್ತದೆ. ಫೆಲೋಶಿಪ್ ಅವಧಿ ಎರಡು ವರ್ಷದ್ದಾಗಿದೆ. ಪ್ರಶಸ್ತಿ ಮೊತ್ತ 4.80 ಲಕ್ಷ ಇರುತ್ತದೆ ಎಂದು ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದ್ದಾರೆ. ಮಾರುತಿ ಸೋನಾರ್ ಅವರಿಗೆ ಈ ಪ್ರಶಸ್ತಿ ಒಲಿದು ಬಂದಿದ್ದಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಪ್ರಮುಖರಾದ ಪ್ರೊ. ಎಸ್.ಬಿ.ಬಿರಾದಾರ, ನಿಜಲಿಂಗಪ್ಪ ತಗಾರೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಮಹಾರುದ್ರ ಡಾಕುಳಗೆ, ಎಸ್.ಬಿ.ಕುಚಬಾಳ, ಡಾ. ಸುನಿತಾ ಕೂಡ್ಲಿಕರ್, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಪವನ ನಾಟೇಕಾರ್, ಬಸವರಾಜ ಹೆಗ್ಗೆ, ಡಾ. ಮಹಾನಂದ ಮಡಕಿ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.