ಹಿರಿಯ ಪತ್ರಕರ್ತ ಬಾಚಲಪುರು, ಜಿಲಾನಿಗೆ ಪತ್ರಕರ್ತರಿಂದ ಬೀಳ್ಕೊಡಿಗೆ

ರಾಯಚೂರು. ಮಾ.೨೬-ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮತ್ತು ಕ್ಯಾಮರಾಮೆನ್ ಮಮ್ಮದ್ ಜಿಲಾನಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಮತ್ತುಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಇಂದು ಬೀಳ್ಕೊಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಮತ್ತುಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮತ್ತು ಕ್ಯಾಮರಾಮೆನ್ ಮಹಮದ್ ಜಿಲಾನಿ ಅವರಿಗೆ ಬೀಳ್ಕೊಡಿಗೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಅವರು ಮಾತನಾಡುತ್ತ ಶರಣಪ್ಪ ಅವರು ಸುಮಾರು ೩ ದಶಕಗಳಿಂದ ಮಾಧ್ಯಮ ರಂಗದಲ್ಲಿ ಕೆಲಸ ಮಾಡಿದ್ದಾರೆ ಇವರು ಅತ್ಯಂತ ಕ್ರೀಯಾಶೀಲಾ ವ್ಯಕ್ತಿಯಾಗಿದ್ದು,ಬದ್ಧತೆಯಿಂದ ಕೆಲಸಮಾಡಿದ್ದಾರೆ,ಇವರಿಗೆ ಕಳೆಯಲ್ಲಿವು ಹೆಚ್ಚಿನ ಅಸಕ್ತಿಯಿದ್ದು ಕಳೆದ ವರ್ಷ ನಮ್ಮ ಜಿಲ್ಲೆಯಲ್ಲಿ ಕೌಟುಂಬಿಕ ನಾಟಕವನ್ನು ಮಾಡಿದ್ದಾರೆ.
ಛಾಯಾಗ್ರಹಕ ಮಮ್ಮದ್ ಜಿಲಾನಿಯು ಮೊದಲಿಗೆ ನಗರದ ಲೋಕಲ್ ಚಾನೆಲ್ ಒಂದರಲ್ಲಿ ಕಾರ್ಯನಿರ್ವಹಿಸಿ ರಾಜ್ಯಮಟ್ಟದ ಚಾನೆಲ್ ಗಳಲ್ಲಿ ಕಾರ್ಯನಿವಾಹಿಸಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶರಣಪ್ಪ ಬಾಚಲಪುರು ಅವರು ಮಾತನಾಡುತ್ತ ನಾನು ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಸಾಕಷ್ಟು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದೇನೆ ನಾನು ದೀಪೋಮೋ ಇಂಜಿನಿಯರಿಂಗ್ ಮುಗಿಸಿದ್ದು ನನಗೆ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಕಳೆದ ೩೪ ವರ್ಷಗಳಿಂದ ಕಾರ್ಯನಿರ್ವಸುತ್ತಿದ್ದೇನೆ.ಜಿಲ್ಲೆಯಲ್ಲಿ ನನಗೆ ಅತ್ಯಂತ ಪ್ರೀತಿಯಿಂದ ಜೊತೆಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ರಾಜ್ಯಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ,ಕಾರ್ಯದರ್ಶಿ ಆರ್.ಗುರುನಾಥ, ಚನ್ನಬಸವ ಬಾಗಲವಾಡ,ಮಮ್ಮದ್ ಜಿಲಾನಿ ಸೇರಿದಂತೆ ಹಿರಿಯ ಮತ್ತು ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು.