ಹಿರಿಯ ಪತ್ರಕರ್ತ ಪುರಂದರರ ಜೋಷಿ ನಿಧನ: ಶ್ರದ್ಧಾಂಜಲಿ-ಮೌನಚರಣೆ

ರಾಯಚೂರು.ಮಾ.೨೭.ಹಿರಿಯ ಪತ್ರಕರ್ತ ಪುರಂದರರ ಜೋಷಿ ಅವರು ಕಳೆದ ಮೂರು ದಶಕಗಳಿಂದ ವಿಭಿನ್ನ ವಿಷಯದಲ್ಲಿ ಸಂಪಾದಕೀಯವನ್ನು ಹೆಸರುವಾಸಿಯಾಗಿದ್ದರು ಎಂದು ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘ,ರಾಯಚೂರು ರಿಪೋರ್ಟರ್ಸ್ ಗಿಲ್ಡ್,ಪ್ರಾದೇಶಿಕ ಪತ್ರಿಕೆ ಸಂಪಾದಕ ಸಂಘ ವತಿಯಿಂದ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ರಾಯಚೂರುವಾಣಿ ಪತ್ರಿಕೆಯ ಹಿರಿಯ ವರದಿಗಾರ ಪುರಂದರ ಪುರಂದರರ ಜೋಷಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಒಂದು ನುಮಿಷ ಮೌನಾಚರಣೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅವರು ಕಳೆದ ನಾಲ್ವತ್ತು ವರ್ಷ ಒಂದೇ ಪತ್ರಿಕೆಯಲ್ಲಿ ಬದ್ದತೆಯಿಂದ ಸೇವೆ ಸಲ್ಲಿಸಿ ಜೋಷಿ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ. ಸರಳ, ಸ್ನೇಹ ಜೀವಿಯಾಗಿ ಎಲ್ಲರೊಂದಿಗೆ ಒಡನಾಟ ಹೊಂದಿದ್ದರು ಎಂದರು.
ದತ್ತು ಸರ್ಕಿಲ್ ಮಾತನಾಡಿ, ಅವರಿಂದ ಅನೇಕ ವಿಷಯಗಳ ಕಲಿತು ವೃತ್ತಿಯಲ್ಲಿ ಅಳವಡಿಸಿಕೊಂಡಿದ್ದಾಗಿ ತಿಳಿಸಿದರು. ಅವರ ಹಾಸ್ಯ ಪ್ರಜ್ಞೆ, ಪದ ಬಳಕೆ, ವರದಿಗಾರಿ ಕೆಯಲ್ಲಿನ ಸೂಕ್ಷ್ಮತೆ ಅತ್ಯಂತ ಸ್ಪೂರ್ತಿದಾಯಕವಾಗಿತ್ತು ಎಂದು ಹೇಳಿದರು.
ರಾಯಚೂರು ವಾಣಿ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ ಮಾತನಾಡಿ, ತಮ್ಮ ತಂದೆ ಅಗಲಿದಾಗ ಅನಾಥ ಪ್ರಜ್ಞೆ ಕಾಡಲಿಲ್ಲ ಪುರಂದರ ಜೋಷಿ ಅಗಲಿದ ಬಂತ ನಿಜವಾಗಿ ಅನಾಥರಾಗಿದ್ದೇವೆ ಎಂದು ಭಾವುಕ ರಾಗಿ ನುಡಿದರು. ಸಂಸ್ಥೆ ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಹೇಳಿದ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕಾರ್ಯನಿರತ ಪತ್ರಕರ್ತರ ಸಂಘ ಕುಟುಂಬದ ಆಸರೆಗೆ ಬರುವಂತೆ ಮನವಿ ಮಾಡಿದರು.
ಪತ್ರಕರ್ತರಾದ ಚನ್ನಬಸವಣ್ಣ, ಜಯ ಕುಮಾರ ದೇಸಾಯಿ ನುಡಿನಮನ ಸಲ್ಲಿಸಿದರು.
ಪತ್ರಕರ್ತರ ಸಂಘದ ಪ್ರ.ಕಾ ಗುರುನಾಥ, ಪತ್ರಕರ್ತರಾದ ಶಿವಪ್ಪ ಮಡಿವಾಳ, ಶರಣಪ್ಪ ಬಾಚಲಾಪುರ, ಜಗನ್ನಾಥ ದೇಸಾಯಿ, ಮಲ್ಲಿಕಾರ್ಜುನ ಸ್ವಾಮಿ, ರಮೇಶ ಗೋರಬಾಳ, ಜಗನ್ನಾಥ ಪುಜಾರಿ, ರಾಮಕೃಷ್ಣ ದಾಸರಿ, ಸಿದ್ದಯ್ಯಸ್ವಾಮಿ, ವೆಂಕಟೇಶ ಹೂಗಾರ್, ರಾಚಯ್ಯ ಸ್ವಾಮಿ, ವಿಶ್ವನಾಥ, ಶಶಾಂಕ್ ಅಂಗಡಿ,ಶಂಕರ್,
ಕ್ಯಾಮರಮನ್ ಗಳಾದ ಸಂತೋಷ, ಶಿವುಕುಮಾರ, ಬಾಲರಾಜ, ಶ್ರೀನಿವಾಸ, ನಾಗರಾಜ್, ಮುರುಳಿ ಸೇರಿ ಇತರರಿದ್ದರು.