ಹಿರಿಯ ಪತ್ರಕರ್ತ ಪಾತಯ್ಯ ಇನ್ನಿಲ್ಲ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಜು.23: ಪಟ್ಟಣದ ಕನಕಯ್ಯನಹಟ್ಟಿ ವಾಸಿಯಾದ ಹಿರಿಯ ಪತ್ರಕರ್ತ ಪಾತಯ್ಯ (75) ಇಂದು ವಿಧಿವಸರಾಗಿರುತ್ತಾರೆ.
ಇಂದು ಬೆಳಗ್ಗೆ 7ಘಂಟೆ ಸಮಯದಲ್ಲಿ ದೇಹದಲ್ಲಿ ಅನಾರೋಗ್ಯ ಕಂಡು ಬಂದ ಕಾರಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ರಾಂಪುರ ಬಳಿ ಲೋ.ಬಿಫಿಯಾಗಿ ನಿಧನರಾಗಿರುತ್ತಾರೆ.
ಶ್ರೀಯುತ ಪಾತಯ್ಯ ನವರು ಸುಮಾರು 40 ವರ್ಷಗಳ ಕಾಲ ಸಂಯುಕ್ತ ಕರ್ನಾಟಕ ಪತ್ರಿಕೆಯ ತಾಲೂಕು ವರದಿಗಾರರಾಗಿ ಮತ್ತು ವಿತರಕರಾಗಿ ಕೆಲಸ ಮಾಡಿದರಲ್ಲದೆ, ಹಲವು ಪತ್ರಿಕೆಗಳ ತಾಲೂಕು ವಿತರಕರಾಗಿ ದೀರ್ಘ ಸೇವೆ ಸಲ್ಲಿಸಿದ್ದರು.
ಪತ್ರಿಕಾ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಕಿರ್ತಿ ಅವರದ್ದು. ಮೃತರು , ಹೆಂಡತಿ ರತ್ನಮ್ಮ ಮಕ್ಕಳಾದ ಚಂದ್ರು, ಸೂರ್ಯ ಮತ್ತು ಸೊಸೆ ಸುಮಂಗಲ ಮತ್ತು ಇಬ್ಬರು ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು – ಬಳಗವನ್ನು ಆಗಲಿದ್ದಾರೆ.