ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ನಿಧನಕ್ಕೆ ಅಷ್ಠಗಿ ಕಂಬನಿ

ಕಲಬುರಗಿ.ಮೇ.13:ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿ ಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ ಕೊರೋನಾ ಸೊಂಕಿಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ನನ್ನನ್ನು ಅತ್ಯಂತ ದುಃಖಕ್ಕಿಡು ಮಾಡಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಕಾಗಲಕರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ವಾರದ ಹಿಂದೆ ಕೊರೋನಾ ಸೊಂಕಿಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಕುರಿತು ವೈದ್ಯರೊಂದಿಗೆ ಮಾತನಾಡಿದ್ದೆ,ಗುಣಮುಖರಾಗುವ ಭರವಸೆಯ ಮಾತು ಹೇಳಿದ್ದರು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದ್ದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಯಾವತ್ತೂ ಕೂಡ ಸಾರ್ವಜನಿಕ ರಂಗದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಕಳೆದ ಮಾರ್ಚ 28 ರಂದು ಅವರ ಕಛೇರಿಯಲ್ಲಿ ನನ್ನನ್ನು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ನಿಯುಕ್ತಿಗೋಳಿದ ಬಳಿಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ ಸಂದರ್ಭದಲ್ಲಿ, ಈ ಸಮಯದಲ್ಲಿ ಚಹಾ ಸಿಗುವುದಿಲ್ಲ ತಂಪು ಪಾನೀಯ ಕುಡಿಯಿರಿ ಎಂದು ಆತ್ಮೀಯತೆ ತೋರಿದ ಜೀವ ಇನ್ನಿಲ್ಲ ಎಂದು ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ. ಆ ಸಂದರ್ಭದಲ್ಲಿ ಶೇಷಗಿರಿ ಹುಣಸಗಿ ಯವರು ಇದ್ದರು.
ಮೂರು ದಶಕಗಳಿಂದ ಹಲವು ಜನಪರ ವರದಿಗಳ ಮೂಲಕ ಸರ್ಕಾರದ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯುತ್ತಿದ್ದ ಕಾಗಲಕರ್ ಅವರು ಕಲಬುರಗಿ ಜಿಲ್ಲೆಯ ಜನತೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ಹಾಗೂ ಪತ್ರಿಕೆ ಓದುಗ ಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.