ಹಿರಿಯ ಪತ್ರಕರ್ತ ಘೋರ್ಪಡೆ ಅವರಿಗೆ ವರದಿಗಾರ ಪ್ರವೀಣ ಬಿರುದು

ತಾಳಿಕೋಟೆ:ಸೆ.17: ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರಿಗೆ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಶ್ರೀ ಖಾಸ್ಗತೇಶ್ವರ ಸಂಗೀತ ಪಾಠಶಾಲೆಯ ವತಿಯಿಂದ ಶ್ರೀ ಖಾಸ್ಗತೇಶ್ವರ ಶಿವಯೋಗಿಗಳವರ 126ನೇ ವಿರಕ್ತಶ್ರೀಗಳ 8ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಶ್ರೀಮಠದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ “ವರದಿಗಾರ ಪ್ರವೀಣ”ವೆಂಬ ಬೀರುದನ್ನು ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗಿದೆ.

ಶ್ರೀ ಖಾಸ್ಗತೇಶ್ವರ ಮಠದಲ್ಲಿ ಗುರುವಾರರಂದು ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರಿಗೆ ವಿಶೇಷವಾಗಿ ಸನ್ಮಾನಿಸಿ “ವರಧಿಗಾರ ಪ್ರವೀಣ” ಎಂಬ ಬಿರುದನ್ನು ಪ್ರಧಾನ ಮಾಡಲಾಗಿದೆ.

ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ವೇ.ಸಂಗಯ್ಯ ವಿರಕ್ತಮಠ, ಗವಾಯಿ ಸಂಗೀತ ಶಿಕ್ಷಕ ಬಸವರಾಜ ಭಂಟನೂರ, ಚಲನಚಿತ್ರ ನಟ ರಾಜು ತಾಳಿಕೋಟಿ, ಸಂಗೀತ ಶಿಕ್ಷಕರಾದ ಪಂ.ಮಲ್ಲಿಕಾರ್ಜುನ ಭಜಂತ್ರಿ, ಈಶ್ವರ ಬಡಿಗೇರ, ಮೊದಲಾದವರು ಇದ್ದರು.