ಕಲಬುರಗಿ,ಮಾ.23- ಹಿರಿಯ ಉರ್ದು ಪತ್ರಕರ್ತ ಹಾಗೂ ಸಾಹಿತಿ ಎಂ.ಎ.ಹಕೀಂ ಶಾಕೀರ್ ಅವರ ಉರ್ದು ಭಾಷೆಯ ಪತ್ರಿಕೋದ್ಯಮ ಮತ್ತು ಉರ್ದು ಸಾಹಿತ್ಯದ ಕ್ಷೇತ್ರದಲ್ಲಿ ಕಳೆದ 55 ವರ್ಷಗಳ ಸುದೀರ್ಘ ಸೇವೆಯನ್ನು ಪರಿಗಣಿಸಿ 1.23 ಲಕ್ಷ ರೂ.ಗಳ ನಗದು ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕøತರು ಕಳೆದ 1970 ರಲ್ಲಿ ಕಲಬುರಗಿಯ ಮೊದಲ ಉರ್ದು ದಿನಪತ್ರಿಕೆ ಸಾಲಮತಿಗೆ ಪ್ರಾರಂಭಿಸಿದರು, ಅವರ ಉರ್ದು ಭಾಷೆಯ ಪತ್ರಿಕೋದ್ಯಮ ಮತ್ತು ಉರ್ದು ಸಾಹಿತ್ಯದ ಪ್ರಚಾರಕ್ಕಾಗಿ ಅವರ 55 ವರ್ಷಗಳ ಸುದೀರ್ಘ ಸೇವೆಯನ್ನು ಪರಿಗಣಿಸಿ 1,25000 ರೂ. ನಗದು ಪ್ರಶಸ್ತಿಯನ್ನು ನಗರದ ಪಾಮ್ ಗ್ರೀನ್ ಗಾರ್ಡನ್ ರೆಸ್ಟೊರೆಂಟ್‍ನಲ್ಲಿ “ಮುಹಿಬ್ಬನ್ ಇ ಹಕೀಮ್ ಶಾಕಿರ್” ಸಂಸ್ಥೆಯಿಂದ ನಗದ, ಸ್ಮರಣಿಕೆ ಹಾಗೂ ಪ್ರಶಸ್ತಿಯನ್ನು ಕಲಬುರಗಿ ಉತ್ತರ ಶಾಸಕಿ ಮೇಡಂ ಕನೀಜ್ ಫಾತಿಮಾ ಅವರು ಪ್ರದಾನ ಮಾಡಿದರು.
ಹಿರಿಯ ಪತ್ರಕರ್ತ ಎಂ.ಎ.ಹಕೀಂ ಶಾಕೀರ್ ಅವರು,ಪತ್ರಿಕೋದ್ಯಮಕ್ಕಾಗಿ ಅವರ ಸುದೀರ್ಘ ಸೇವೆಯನ್ನು ಶಾಸಕಿ ಶ್ಲಾಘಿಸಿದರು.
ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ. ವಹಾಬ್ ಅಂದಲೀಬ್, ಶಾನವಾಜ್ ಖಾನ್ ಶಾಹೀನ್, ಡಾ. ಅಥರ್ ಮೊಯಿಜ್, ಇಂಜಿನಿಯರ್ ಅಕ್ರಮ್ ನಕ್ಕಾಶ್, ಮೌಲಾನಾ ನೋಹ್ ಮತ್ತು ಅನೇಕರು ಹಕೀಮ್ ಶಾಕಿರ್ ಅವರ ಸೇವೆಯನ್ನು ಶ್ಲಾಘಿಸಿದರು.
ಇಂಜಿನಿಯರ್ ಅಬ್ದುಲ್ ಖಾದಿರ್ ಇರ್ಫಾನ್, ಇಫ್ತೆಕರ್ ಆರಿಫ್, ಆದಿಲ್ ಸುಲೈಮಾನ್ ಸೇಠ್, ಎಂಡಿ ಅಜ್ಮತ್ ಮೊಹಮ್ಮದ್, ವಾಲಿ ಅಹ್ಮದ್, ಫತೇಹ್ ಎಂ.ಡಿ ರಿಜ್ವಾನ್, ಅಥರ್ ಪರ್ವೇಜ್, ಅಜರ್ ಪರ್ವೇಜ್, ಅಜೀಜ್ ಖಾರಾಡಿ, ಸಾಜಿದ್ ರಂಜೋಲ್ವಿ, ಎಂಜಿನಿಯರ್ ಇರ್ಫಾನ್ ಅಲಿ ಮಣಿಯಾರ್, ಎಂ.ಡಿ ಇರ್ಫಾನ್ ಅಲಿ ಮಣಿಯಾರ್, ಎಂ.ಡಿ ಇಸ್ಮಾಯಿಲ್, ಡಾ. ದಾಘಿ, ಮಹೆಬೂಬ್ ಅಲಿ, ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.