ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ

ದಾವಣಗೆರೆ,ಜ.೬;- ಶ್ರೀ ಜಯದೇವ ವೃತ್ತದ ಬಳಿಯ ಕಾರಿಗನೂರು ಪರಮೇಶ್ವರಪ್ಪ ಕಾಂಪ್ಲೇಕ್ಸ್ನಲ್ಲಿ ಹಿರಿಯ ಪತ್ರಕರ್ತರಾದ ಎಸ್.ಬಿ.ಜಿನದತ್ತ ಹಾಗೂ ಬಕ್ಕೇಶ್ ನಾಗನೂರು ಅವರುಗಳ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ದಾವಣಗೆರೆ ಜಿಲ್ಲೆ ಎಂಬ ನೂತನ ಸಂಘವನ್ನು ಅಸ್ಥಿತ್ವಕ್ಕೆ ತರಲು ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.  ಅಧ್ಯಕ್ಷರಾಗಿ ಎಸ್.ಬಿ.ಜಿನದತ್ತ, ಉಪಾಧ್ಯಕ್ಷರುಗಳಾಗಿ ಬಕ್ಕೇಶನಾಗನೂರು, ಎಸ್.ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಐ.ಗುರುಶಾಂತಪ್ಪ, ಸಹಕಾರ್ಯದರ್ಶಿಯಾಗಿ ಬಸವರಾಜ ಐರಣಿ, ಸಂಘಟನಾ ಕಾರ್ಯದರ್ಶಿ ಆರ್.ಎಸ್.ತಿಪ್ಪೇಸ್ವಾಮಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಶಿವಶರಣಪ್ಪ ಎಂ.ಎಸ್, ಬಾಬುದಾಮೋದರ್,ಸುಬ್ರಮಣ್ಯನಾಡಿಗ್ ಅವರುಗಳು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ನೂತನ ಕಾರ್ಯದರ್ಶಿ ಐ.ಗುರುಶಾಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.