ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ನಿಧನ

ನವದೆಹಲಿ,ಫೆ.೨೧- ಖ್ಯಾತ ನ್ಯಾಯವಾದಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಫಾಲಿ ಸ್ಯಾಮ್ ನಾರಿಮನ್ ದೆಹಲಿಯಲ್ಲಿಂದು ಮುಂಜಾನೆ ನಿಧನರಾಗಿದ್ದಾರೆ. ಈ ಮೂಲಕ ಹಿರಿಯ ನ್ಯಾಯವಾದಿಯ ಯುಗ ಅಂತ್ಯವಾಗಿದೆ.ಫಾಲಿ ನಾರಿಮನ್‌ಅವರಿಗೆ ೯೫ ವರ್ಷ ವಯಸ್ಸಾಗಿತ್ತು. ೭೦ ವರ್ಷಗಳಿಗೂ ಹೆಚ್ಚು ಕಾಲ ವಕೀಲಿ ವೃತ್ತಿ ನಡೆಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಪರ ಕಾವೇರಿ, ಕೃಷ್ಣ, ಮಹದಾಯಿ ಜಲವಿವಾದಗಳಲ್ಲಿ ವಾದ ಮಾಡಿದ್ದರು. ಅನೇಕ ಪ್ರಕರಣಗಳಲ್ಲಿ ವಾದ ಮಂಡಿಸಿ ಅದರಲ್ಲಿ ಕೆಲವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡಿದ್ದರು೧೯೨೯ರ ಜನವರಿ ೧೦ ರಂದು ರಂಗೂನ್‌ನಲ್ಲಿ ಪಾರ್ಸಿ ಪೋಷಕರಿಗೆ ಜನಿಸಿದ ಫಾಲಿ ನಾರಿಮನ್, ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸದಲ್ಲಿ ಬಿ.ಎ. ಮತ್ತು ೧೯೫೦ ರಲ್ಲಿ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಸ್ಥಾನ ಪಡೆದಿದ್ದರು.೧೯೫೦ ನವೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್‌ನ ವಕೀಲರಾಗಿ ನೋಂದಾಯಿಸಿಕೊಂಡರು ಮತ್ತು ೧೯೬೧ ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.೧೯೭೧ ರಲ್ಲಿ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. ಅವರು ಮೇ ೧೯೭೨ ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು೧೯೯೧ರಲ್ಲಿ ಪದ್ಮಭೂಷಣ ಮತ್ತು ೨೦೦೭ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ನಾರಿಮನ್ ಅವರು ೨೦೦೨ ರಲ್ಲಿ ನ್ಯಾಯಕ್ಕಾಗಿ ಗ್ರೂಬರ್ ಪ್ರಶಸ್ತಿ ಸಹ ಪಡೆದ ಹಿರಿಮೆ ಅವರಿಗೆ ಸಲ್ಲುತ್ತದೆ. ಅಂತರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ನ್ಯಾಯಶಾಸ್ತ್ರಜ್ಞರಾಗಿದ್ದ ಹೆಗ್ಗಳಿಕೆ ಪಡೆದಿದ್ದರುನಾರಿಮನ್ ಅವರು ೧೯೫೫ ರಲ್ಲಿ ಬಾಪ್ಸಿ ಎಫ್. ನಾರಿಮನ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಮತ್ತು ಮಗಳು. ಅವರ ಮಗ ರೋಹಿಂಟನ್ ನಾರಿಮನ್ ಅವರು ಹಿರಿಯ ವಕೀಲರು ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ರೋಹಿಂಟನ್ ಅವರು ೨೦೧೧ ರಿಂದ ೨೦೧೩ ರವರೆಗೆ ಭಾರತದ ಸಾಲಿಸಿಟರ್ ಜನರಲ್ ಹುದ್ದೆ ಸಹ ನಿರ್ವಹಿಸಿದ್ದರು.ನಾರಿಮನ್ ಅವರ ಆತ್ಮಕಥೆ “ಬಿಫೋರ್ ಮೆಮೊರಿ ಫೇಡ್ಸ್” ವ್ಯಾಪಕವಾಗಿ ಓದಲ್ಪಟ್ಟ ಪುಸ್ತಕವಾಗಿದೆ. ನಾರಿಮನ್ ಅವರು ಪ್ರಮುಖ ಪ್ರಕರಣಗಳಲ್ಲಿ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ, ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅವರು ಟೀಕಿಸಿ ನನ್ನ ದೃಷ್ಟಿಯಲ್ಲಿ, ಸಂವಿಧಾನದ ತಪ್ಪಾಗಿ ತೀರ್ಪು ನೀಡಿದೆ ಎಂದು ಹೇಳಿದ್ದರು

ಸಂತಾಪ: ಕಂಬನಿ

ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ನಿಧನಕ್ಕೆ ಅನೇಕ ನ್ಯಾಯವಾದಿಗಳು ಸಂತಾಪ ಸೂಚಿಸಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನಾರಿಮನ್ ಅವರ ಸಾವು “ಯುಗ ಅಂತ್ಯ” ಎಂದು ಹೇಳಿದ್ದಾರೆ.”ಕಾನೂನು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಜೀವಂತ ದಂತಕಥೆ ಅವರು. ಎಲ್ಲಾ ವೈವಿಧ್ಯಮಯ ಸಾಧನೆಗಳ ಮೇಲೆ, ಅವರು ತಮ್ಮ ತತ್ವಗಳಿಗೆ ಅಂಟಿಕೊಂಡಿದ್ದರು ಎಂದು ಹೇಳಿದ್ದಾರೆವಕೀಲ ಮತ್ತು ಕಾರ್ಯಕರ್ತ ಪ್ರಶಾಂತ್ ಭೂಷಣ್‌ಅವರು , ನಾರಿಮನ್ ಅವರನ್ನು ತಮ್ಮ ಸಮುದಾಯದ “ಭೀಷ್ಮ ಪಿತಾಮಹ” ಅವರ ನಿಧನದ ವಿಷಯ “ತುಂಬಾ ದುಃಖದ ಸುದ್ದಿ ಎಂದಿದ್ಧಾರೆ.ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಭಾರತದ ಮಹಾನ್ ಪುತ್ರ ನಿಧನರಾಗಿದ್ದಾರೆ” ಎಂದು ಹೇಳಿದ್ದಾರೆ. ಕೇವಲ ನಮ್ಮ ದೇಶದ ಶ್ರೇಷ್ಠ ವಕೀಲರಲ್ಲಿ ಒಬ್ಬರಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಬೃಹದಾಕಾರವಾಗಿ ನಿಂತಿರುವ ಅತ್ಯುತ್ತಮ ಮಾನವರಲ್ಲಿ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ಧಾರೆ.

ಮೋದಿ ಸಂತಾಪ
ದೇಶದ ಅತ್ಯಂತ ಹಿರಿಯ ನ್ಯಾಯವಾದಿಯಾಗಿದ್ದ ಫಾಲಿ ನಾರಿಮನ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.ಫಾಲಿ ಎಸ್ ನಾರಿಮನ್ ಅವರು ಅತ್ಯಂತ ಮಹೋನ್ನತ ಕಾನೂನು ಅರಿವಿದ್ದ ಮನಸ್ಸು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರು ಅವರ ಅಗಲಿಕೆ ಅತೀವ ದು:ಖ ತರಿಸಿದೆ ಎಂದು ಹೇಳಿದ್ದಾರೆ.ಈ ಕುರಿತು ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗುವಂತೆ ಮಾಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಅಗಲಿಕೆಯಿಂದ ನೋವು ತರಿಸಿದೆ ಎಂದಿದ್ದಾರೆ.ದೇಶದ ಹಿರಿಯ ನ್ಯಾಯವಾದಿಯಾಗಿ ಜನರಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು. ಅವರ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಯಾಗಿ ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಹಾಗೆ ಫಾಲಿ ನಾರಿಮನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.