ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕøತರಾದ ವೀರಭದ್ರಪ್ಪ ಉಪ್ಪಿನವರಿಗೆ ಗೌರವ ಸನ್ಮಾನ

ಬೀದರ:ನ.20:ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು, ಕಲ್ಯಾಣ ಭಾರತಿ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗು ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿ ಬೀದರ ಇವುಗಳ ವತಿಯಿಂದ ರಾಜ್ಯ ಮಟ್ಟದ ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತರಾದ ವೀರಭದ್ರಪ್ಪನವರನ್ನು ಇಂದು ನಗರದ ಸ್ಪರ್ಧಾ ಸಂಕಲ್ಪ ಅಕಾಡೆಮಿ ಆವರಣದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಸಮಾಜ ಸೇವಕರಾದ ವೀರಭದ್ರಪ್ಪ ಉಪ್ಪಿನ ಅವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಇವರ ವತಿಯಿಂದ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನ ಆಗಿರುವ ಪ್ರಯುಕ್ತ ಉಪ್ಪಿನ ರವರನ್ನು ಸನ್ಮಾನಿಸಿ ಕರ್ನಾಟಕ ರಾಜ್ಯ ಶಿಕ್ಷಕ ವಿಕಾಸ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳಾದ ಸಂಜೀವಕುಮಾರ ಸ್ವಾಮಿ ಮಾತನಾಡಿ, ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರು ನಮ್ಮ ಜಿಲ್ಲೆಯರಾಗಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಸೇವೆ ಸರ್ವರಿಗೂ ಆದರ್ಶ. ಸುಮಾರು ಮೂರು ದಶಕಗಳಿಂದ ನಮ್ಮ ಬೀದರ ಜಿಲ್ಲೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರು ವುದು ಶ್ಲಾಘನಿಯ. ಇನ್ನೂ ಮುಂದೆ ಹೆಚ್ಚು ಹೆಚ್ಚು ಸಮಾಜ ಸೇವೆಗಳನ್ನು ಮಾಡಿ ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರ ಲೆಂದು ಶುಭ ಹಾರೈಸಿದರು.
ಸ್ಪರ್ಧಾ ಸಂಕಲ್ಪ ಅಕಾಡೆಮಿ ಮುಖ್ಯಸ್ಥರಾದ ಶ್ರೀ ನಾಗೇಶ ಸ್ವಾಮಿ ಮಸ್ಕಲ ಮಾತ ನಾಡಿ, ವೀರಭದ್ರಪ್ಪ ಉಪ್ಪಿನರವರು ನಮ್ಮ ಬೀದರ ಜಿಲ್ಲೆಯಲ್ಲಿ ಸಮಾಜ ಕ್ಷೇತ್ರದಲ್ಲಿ ಗಣ ನೀಯ ಸೇವೆ ಸಲ್ಲಿಸುತ್ತಿದ್ದು, ನಮ್ಮೆಲ್ಲರಿಗೆ ಆದರ್ಶಪ್ರಿಯರಾಗಿದ್ದಾರೆ. ಇವರ ಸಮಾಜ ಸೇವಾ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಯನ್ನು ಪರಿಗಣಿಸಿ ಗೌರವಪೂರ್ವಕವಾಗಿ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸುವುದು ನಮ್ಮೆಲ್ಲ ರಿಗೆ ಸಂತೋಷದ ವಿಷಯ ಎಂದು ನುಡಿದರು .

ಈ ಸಂದರ್ಭದಲ್ಲಿ ವಿಕಾಸ ಪರಿಷತ್ತಿನ ಅಧ್ಯಕ್ಷರಾದ ಅನಂತ ಕುಲಕರ್ಣಿ, ಉಪಾಧ್ಯಕ್ಷರಾದ ಮನೋಹರ್ ಸಿಂಗ್ ಪಾಟೀಲ್,ಮಾರುತಿ ಬಿರಾದಾರ, ಮಿತ್ರ ಮಂಡಳಿಯ ಪ್ರಮುಖ ರಾದ ಏನ್. ಆರ್. ಕುಲ ಕರ್ಣಿ, ಕರಬಸಪ್ಪ, ಸುರೇಶ ದೇಗಲಮಡಿ,ರವಿ ಕುಮ ನೂರ, ಸಿದ್ರಾಮ ಹೂಗಾರ ನಂದಕುಮಾರ, ಧೂಳಪ್ಪ ಬಿರಾದಾರ್, ವಿವಿಧ ಸಂಘ ಗಳ ಪ್ರಮುಖರು ಹಾಗು ಸ್ಪರ್ಧಾ ಸಂಕಲ್ಪ ಅಕಾಡೆಮಿ ಯ ಮಕ್ಕಳು ಈ ಶುಭ ಸಂದರ್ಭ
ಉಪಸ್ಥಿತರಿದ್ದರು.