ಹಿರಿಯ ನಾಗರಿಕರ ರೈಲ್ವೆ ರಿಯಾಯಿತಿಗೆ ಮನವಿ

ರಾಯಚೂರು.ನ.೧೯- ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದರದಲ್ಲಿ ರಿಯಾಯಿತಿ ಪ್ರಾರಂಭಿಸಲು ಕೇಂದ್ರ ರೈಲ್ವೆ ಮಂತ್ರಿಗೆ ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ಅವರು ಮನವಿ ಮಾಡಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಅವರು, ಹಿರಿಯ ನಾಗರಿಕರಿಗೆ ಗೌರವ ಪೂರ್ವಕವಾಗಿ ರೈಲ್ವೆ ಪ್ರಯಾಣದಲ್ಲಿ ಹಿಂದಿನಿಂದಲೂ ರಿಯಾಯಿತಿಯನ್ನು (೪೦% ಪುರುಷರಿಗೆ, ೫೦% ಮಹಿಳೆಯರಿಗೆ) ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ರಿಯಾಯಿತಿಯನ್ನು ರೈಲ್ವೆ ಇಲಾಖೆ ಯವರು ರದ್ದುಪಡಿಸಿದ್ದಾರೆ. ಭಾರತದಲ್ಲಿ ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆಯಾಗಿದ್ದರೂ, ಇನ್ನೂ ರಿಯಾಯಿತಿಯನ್ನು ಪುನರ್ ಪ್ರಾರಂಭಿಸಿರುವುದಿಲ್ಲ. ಹಲವಾರು ರಾಷ್ಟ್ರಗಳು ಕೋವಿಡ್ ಸಮಯದಲ್ಲೂ ಹಿರಿಯ ನಾಗರಿಕರಿಗೆ ನೀಡುವ ರೈಲ್ವೆ ಪ್ರಯಾಣದ ರಿಯಾಯಿತಿಯನ್ನು ರದ್ದುಪಡಿಸಿರುವುದಿಲ್ಲ.
ಉದಾಹರಣೆ ಗ್ರೇಟ್ ಬ್ರಿಟನ್ ಶೇ.೬೪ ರಷ್ಟು ನೀಡುತ್ತದೆ. ಹಲವಾರು ಹಿರಿಯ ನಾಗರಿಕರ ಬೇಡಿಕೆಯಂತೆ ಈಗ ಕೋವಿಡ್ ಪ್ರಕರಣಗಳು ಸಂಪೂರ್ಣ ಆಗಿರುವ ಕಾರಣ. ಈ ರಿಯಾಯಿತಿಯನ್ನು ಪುನರ್ ಪ್ರಾರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಜೀ ಅವರಿಗೆ ಬಾಬುರಾವ್ ಮನವಿ ಮಾಡಿದ್ದಾರೆ.