ಹಿರಿಯ ನಾಗರಿಕರ- ನಿವೃತ್ತ ನೌಕರರ ಸಂಘದಿಂದ ಮತದಾನ ಜಾಗೃತಿ ಅಭಿಯಾನ

ದಾವಣಗೆರೆ. ಮೇ.8;  ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಸದಸ್ಯರು ದಾವಣಗೆರೆ ನಗರದ ಎಂ ಸಿ ಸಿ ಬಿ ಬ್ಲಾಕ್ ಮಕ್ಕಳ ಉದ್ಯಾನವನದಲ್ಲಿ ಮೇ  10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಪಾಲ್ಗೊಂಡು ಮತದಾನ ಮಾಡಲು ಜಾಗೃತಿ ಉಂಟು ಮಾಡುವ ಜಾಥಾ ನಡೆಸಿದರು. ನಂತರ  ಜಾಗೃತಿ ಜಾಥಾ ಉದ್ಯಾನವನದಿಂದ ಪ್ರಾರಂಭವಾಗಿ ಗುಂಡಿ ಸರ್ಕಲ್ ಮೂಲಕ ಮಾಮಾಸ್ ಜಾಯಿಂಟ್ ಮುಂಭಾಗದ ಮುಂಭಾಗದ ರಸ್ತೆಯಲ್ಲಿ  ಸಾಗಿ ಮಕ್ಕಳ ಉದ್ಯಾನವನಕ್ಕೆ ಹಿಂದಿರುಗಿತು. ಈ ಕಾರ್ಯಕ್ರಮದಲ್ಲಿ  ಜಿ ಪಂ ಉಪ ಕಾರ್ಯನಿರ್ವಾಹಕ ಅಧಿಕಾರಿಗಳು , ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಎಸ್ ಗುರುಮೂರ್ತಿ ,ಅಂದನೂರು ಮುಪ್ಪಣ್ಣ,ಕಂಸಾಗರದ ಪಂಚಣ್ಣನಿವೃತ್ತ ನೌಕರರ ಸಂಘ ಅಧ್ಯಕ್ಷ ಎ ಆರ್ ಉಜ್ಜನಪ್ಪ, ಕಾರ್ಯದರ್ಶಿ ಬಿ ಕೆ ರೇಣುಕಾಮೂರ್ತಿ,ಸಿ ಎಂ ಮಲ್ಲಿಕಾರ್ಜುನಯ್ಯ, ಎನ್ ಜಿ ಬಸವರಾಜ್,ಕೆ ಜಿ ರುದ್ರಗೌಡ,ಎನ್ ಜಿ ಗೌಡ, ಹಾಲಪ್ಪ,ರಾಮಚಂದ್ರನಾಯ್ಕ,ಕರುಣಾಜೀವ ಸಂಘದ ಬಸವಲಿಂಗಪ್ಪ ಶಿವನಕೆರೆ ಮತ್ತಿತರ ನೂರಾರು ಜನ ಹಿರಿಯ ನಾಗರಿಕರು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.