ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರಾಗಿ ಜೀವಿಸಬೇಕು:ಪ್ರೋ. ದೆವೇಂದ್ರ ಕಮಲ

ಬೀದರ:ಜ.9:ಸಮಾಜದ ಯುವ ಜನತೆ ಹಾಗೂ ಉಳಿದ ಎಲ್ಲಾ ಜನರು ಹಿರಿಯ ನಾಗರಿಕರ ಚಲನವಲನ ಹಾಗೂ ನಡತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಆದ್ದರಿಂದ ಹಿರಿಯ ನಾಗರಿಕರು ತಾವು ಗಳಿಸಿದ ಅನುಭವದ ಹಿನೆÀ್ನಲೆಯಲ್ಲಿ ಸಮಾಜದ ಮಾರ್ಗದರ್ಶಕರಾಗಿ, ಜನರಿಗೆ ಸರಿಯಾದ ದಾರಿ ತೋರಿಸುವ ಚಟುವಟಿಕೆಯಲ್ಲಿ ತೊಡಗಿರಬೇಕೆಂದು ಬಿ.ವಿ.ಬಿ. ಮಹಾವಿದ್ಯಾಲಯದಲ್ಲಿ ನಿವೃತ್ತ ಪ್ರಾಚಾರ್ಯರಾದ ಪ್ರೋ. ದೆವೇಂದ್ರ ಕಮಲ ರವರು ಹಿರಿಯ ನಾಗರಿಕರಿಗೆ ಕರೆ ನೀಡಿದರು. ಅವರು ಜೈಹಿಂದ ಹಿರಿಯ ನಾಗರಿಕರ ಸಂಘ ದಿಂದ ಆಯೋಜಿಸಲಾದ ಕೊರೋನಾ ನಂತರದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿರಿಯ ನಾಗರಿಕರು ಜೀವನೋತ್ಸಾಹವನ್ನು ಕಾಯ್ದುಕೊಂಡು ಬರುವ ಮೂಲಕ ಆರೋಗ್ಯವಂತರಾಗಿ ಬಾಳಬೇಕು. ಕೌಟುಂಬಿಕ ಸಮಸ್ಯೆಗಳು ಏನೇ ಇದ್ದರೂ, ಕುಟುಂಬದ ಸದಸ್ಯರ ವರ್ತನೆ ಹೇಗೇ .
ನನ್ನ ನೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರೆ ಮುಂದೆ ಬರುವ ದಿನಗಳಲ್ಲಿ ಕೇಂದ್ರ ಸರಕಾರ ಶಿಕ್ಷಣದ ನೀತಿಯನ್ನು ಬದಲಾವಣೆ ಮಾಡಲು ಮುಂದಾಗಿದೆ. ಅದರಂತೆ ನಾವು ಸಹ ನಮ್ಮ ವಿಷಯದಲ್ಲಿ ಅನೇಕ ರೀತಿಯ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆದರಿಂದ ಇನ್ನು ಹೆಚ್ಚಿನ ಕೆಲಸ ಮುಂದಿನ ದಿನಗಳಲ್ಲಿ ಮಾಡಬೇಕಾಗಿದೆ.
ಕೇಂದ್ರ ಸರಕಾರ ಎಲ್ಲಾ ಶಿಕ್ಷಕರಿಗೆ ಸರಿ ಸಮಾನವಾಗಿ ಮಾಡಿದರೆ ನಮ್ಮ ಸಿ & ಆರ್ ನಿಯಮ ಬೇಗನೆ ಕಾರ್ಯ ರೂಪಕ್ಕೆ ಬರುತ್ತದೆ. ಮತ್ತು ಬೆಂಗಳೂರಿನಲ್ಲಿ ಇದರ ಬಗ್ಗೆ ಎಲ್ಲಾ ನಾಯಕರು ಸಂಘದವರು ಕೂಡಿ ಈ ಕೆಲಸ ಮಾಡುತ್ತಿದ್ದಾರೆ.
ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲಾ ಮಕ್ಕಳು ಇನ್ನು ಮುಂದೆ ಕಡ್ಡಾಯವಾಗಿ ಆಟ ಮತ್ತು ಕ್ರೀಡೆಯಲ್ಲಿ ಭಾಗವಹಿಸುವುದು ಅನಿವಾರ್ಯ ಆಗುತ್ತದೆ. ಎಲ್ಲಾ ಶಾಲೆಗಳಿಗೆ ಬಂದಿರುವ ಪಠ್ಯ ಪುಸ್ತಕಗಳಂತೆ ಓದಿಸುವುದು ಈಗಾಗಲೇ ನಡೆದಿದ್ದೆ ಆದರೆ ನಾವು ಬಿ ಪಾರ್ಟ ದಿಂದ ಎ ಪಾರ್ಟಗೆ ಈ ವರ್ಷ ಬಹುತೇಕ ಬರುತ್ತದೆ. ಅಂದರೆ 10ನೇ ತರಗತಿಯ ಮಕ್ಕಳಿಗೆ ಇನ್ನು ಮುಂದೆ ದೈಹಿಕ ಶಿಕ್ಷಣದ ಪರೀಕ್ಷೆಯು ನಡೆಸಬೇಕಾಗುತ್ತದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಬರುವ ದಿನಗಳಲ್ಲಿ ಕೆಲಸ ಮಾಡಬೇಕಾಗಿದೆ.
ನಮ್ಮ ಜಿಲ್ಲೆಯಲ್ಲಿ ಕ್ರೀಡೆಗೆ ಪಾಲಕರು ಅಷ್ಟು ಮಹತ್ವ ಕೊಡುತ್ತಿಲ್ಲಾ. ಬರೆ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುತ್ತಿದ್ದಾರೆ. “ಆರೋಗ್ಯವೇ ಭಾಗ್ಯ” ಎಂದು ಹೇಳುವ ಸಮಾಜ ಕ್ರೀಡೆಯಲ್ಲಿ ಭಾಗವಹಿಸಬೇಕಾಗದರೆ ಹಿಂದೇಟು ಹಾಕುತ್ತಾರೆ. ಆದರಿಂದ ಮಕ್ಕಳ ಬೆಳವಣಿಗೆ ಬಹಳಷ್ಟು ಕುಂಠಿತವಾಗುತ್ತಿದೆ. ಮಕ್ಕಳ ಕ್ರೀಡೆಯಲ್ಲಿ ಅತೀ ಇಷ್ಟದಿಂದ ಭಾಗವಹಿಸುವರು. ಅವರ ಆರೋಗ್ಯ ಬಹಳ ಚೆನ್ನಾಗಿ ಇರುತ್ತದೆ.
ನಾವು ಹೂಬಳ್ಳಿಯಿಂದ ರಾಷ್ಟ್ರ ಮಟ್ಟದವರೆಗೆ ಮಕ್ಕಳನ್ನು ತೈಯಾರಿ ಮಾಡಿರುತ್ತೇವೆ. ಆದರೆ ಒಳ್ಳೆಯ ಆಟ ಆಡುವ ಮಗುವಿಗೆ ಪಾಲಕರು ಬಳಸುವದಿಲ್ಲ. ಆದರಿಂದ ನಮ್ಮ ಜಿಲ್ಲೆ ಕ್ರೀಡೆಯಲ್ಲಿ ಹಿಂದೆ ಇದೆ. ಹೂಬಳ್ಳಿಯಲ್ಲಿ ಕನಿಷ್ಟ ಶಾಲೆಗಳು ಭಾಗವಹಿಸುವುದು. ಇದು ಮೊದಲು ಸರಿಯಾಗಿ ಬೇಕು. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು.
ಶಾಲೆಯಲ್ಲಿ ಕ್ರೀಡೆ ಬಂದಾಗ ಅಲ್ಲಿಯು ಸ್ವಲ್ಪ ಏರುಪೇರಾಗುತ್ತದೆ. ಮುಖ್ಯ ಗುರುಗಳು ಕಡ್ಡಾಯವಾಗಿ ಮಕ್ಕಳನ್ನು ಬಿಡುಗಡೆ ಮಾಡಿದರೆ ಕ್ರೀಡೆ ಉತ್ತಮ ರೀತಿಯಲ್ಲಿ ನಡೆಯುತ್ತವೆ. ಇದು ನಡೆಯಬೇಕಾದರೆ ಹಣ ಬಹಳ ಮುಖ್ಯವಾಗಿದ್ದು, ಸರಕಾರ ಸರಿಯಾದ ರೀತಿಯಲ್ಲಿ ತಮ್ಮ ಕ್ರೀಡೆಯ ಬಗ್ಗೆ ಪ್ರತಿಕ್ರೀಯಿಸಿದರೆ ಮಾತ್ರ ಕ್ರೀಡೆಯಲ್ಲಿ ಹೆಚ್ಚು ಮಕ್ಕಳು ಭಾಗವಹಿಸುತ್ತಾರೆ. ಮೊದಲು ಹಣದ ಬಗ್ಗೆ ಮುಖ್ಯ ಗುರುಗಳು ಹಾಗೂ ಶಿಕ್ಷಣ ಇಲಾಖೆ ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಹಣ ಒದಗಿಸುವುದು. ನೋಡಿ ನಮ್ಮ ದೇಶ ಸ್ವತಂತ್ರವಾಗಿ 74 ವರ್ಷಗಳು ಕೆಳೆದರೂ ಮಕ್ಕಳ ಹಣದಲ್ಲೆ ನಾನು ಕ್ರೀಡಾಕೂಟ ಮಾಡುತ್ತೇವೆ. ಅದಕ್ಕೆ ಅಂತ ಪ್ರತೇಕವಾದ ಹಣ ಸರಕಾರ ಕೊಡುವುದಿಲ್ಲಾ. ಇದರಿಂದಲೂ ಮಕ್ಕಳು ಕ್ರೀಡೆಯಲ್ಲಿ ಕಡಿಮೆ ಭಾಗವಹಿಸುತ್ತಾರೆ. ಜಿಲ್ಲಾ ಪಂಚಾಯತನಲ್ಲಿ ಕ್ರೀಡಗೆ ಪ್ರತ್ಯೇಕ ಹಣ ಇದೆ. ಈ ಹಣ ಪ್ರತಿ ವರ್ಷ ಎಲ್ಲಾ ಗ್ರಾಮ ಪಂಚಾಯತಿಗೆ ಬರುತ್ತದೆ. ಅಲ್ಲಿಂದ ಶಾಲೆಗೆ ಸರಿಯಾದ ರೀತಿಯಲ್ಲಿ ಮುಟ್ಟುವುದಿಲ್ಲ. ಇದನ್ನು ಜಿಲ್ಲಾ ಪಂಚಾಯತ ಈ ವರ್ಷದಿಂದ ಪ್ರತಿ ಗ್ರಾಮ ಪಂಚಾಯತಿಗಳಿಗೆ ಪತ್ರ ಬರೆದು ಕ್ರೀಡೆಗೆ 2% ಹಣವನ್ನು ಮುಟ್ಟುವಂತೆ ಮಾಡಿದರೆ ಕ್ರೀಡಾಪಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ದೇಶದಲ್ಲಿ 6 ತಿಂಗಳಿಂದ ಕೋವಿಡ-19 ಬಂದ ನಂತರ ಸಮಾ, ಪಾಲಕರು, ಮಕ್ಕಳು, ಶಿಕ್ಷಕರು ಮತ್ತು ಶಿಕ್ಷಣದಲ್ಲಿಯು ಕೂಡಾ ಬದಲಾವಣೆ ಬಂದಿದೆ. ಇದರಲ್ಲಿಯೂ ಸಹ ನಮ್ಮ ಶಿಕ್ಷಕರು ಸರಕಾರದ ಆದೇಶದಂತೆ ಕೋವಿಡ-19ರಲ್ಲಿಯು ಸಹ ಚಾಚು-ತಪ್ಪದೆ ಕೊಟ್ಟ ಕೆಲಸ ಮಾಡಿರುತ್ತಾರೆ.
ಶಾರೀರಕ್ಕೆ ಕಠಿಣ ಪರಿಶ್ರಮ ಕೊಟ್ಟಾಗ ಮಾತ್ರ ಮಕ್ಕಳು ಸರಿಯಾದ ರೀತಿಯಲ್ಲಿ ಬೆಳವಣಿಗೆ ಆಗುತ್ತಾರೆ. ಇದರಿಂದ ಅವರ ಆರೋಗ್ಯ ಸಹ ಚೆನ್ನಾಗಿ ಇರುತ್ತದೆ.
ನಮ್ಮ ಜಿಲ್ಲೆ ರಾಜ್ಯದಲ್ಲಿ ಅತಿ ಬಲಿಷ್ಟವಾದ ಮಕ್ಕಳು ಇರುವ ಜಿಲ್ಲೆಯಾಗಿದೆ. ನಮ್ಮ ಹತ್ತಿರ ಬಹಳ ಒಳ್ಳೆಯ ಕ್ರೀಡಾಪಟ್ಟುಗಳು ಇದ್ದಾರೆ. ಅವರನ್ನು ಹೊರತೆಗೆಯುವುದೇ ನಮ್ಮ ಕೆಲಸವಾಗಿರಬೇಕು. ಇವರು ಬಂದರೆ ಮಾತ್ರ ನಮ್ಮ ಜಿಲ್ಲೆಯು ರಾಜ್ಯದಲ್ಲಿ ಹೆಸರು ಮಾಡುವದು.
ಜಿಲ್ಲೆಯಿಂದ ಹಿಡಿದು ವಿಭಾಗ ಮಟ್ಟಕ್ಕೆ ಹೋಗಬೇಕಾದರೆ, ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಹಣ ಕೊಟ್ಟು ಕಳಿಸುವಂತಹ ವ್ಯವಸ್ಥೆಯಾಗಬೇಕು. ಹಣದ ಕೊರತೆ ಇದ್ದ ಕಾರಣ ದೈಹಿಕ ಶಿಕ್ಷಕ ತನ್ನ ವೇತನದ ದುಡ್ಡಿನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಥಿತಿ ಇದೆ. ಇದು ದೂರವಾಗಬೇಕು.
“ಸದ್ರಢವಾದ ದೇಹದಲ್ಲಿ ಸದ್ರಢವಾದ ಮನಸ್ಸು ಇರುತ್ತದೆ”. ಇದರಿಂದ ರೋಗ ನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ. ಆದರಿಂದ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾದ ವಿಷಯ. ಜಿಲ್ಲೆಯ ದೈಹಿಕ ಶಿಕ್ಷಕರು ಬಹಳ ಶ್ರಮ ಜೀವಿಗಳು ದಿನಾಲು ಶಾಲೆಯಲ್ಲಿ ಕ್ರೀಡೆಯ ತೈಯಾರಿ ಮಾಡುತ್ತಾ ಮಕ್ಕಳ ಆಯ್ಕೆ ಮಾಡಿ ಪ್ರತಿದಿನ ಅವರನ್ನು ಅಭ್ಯಾಸ ಮಾಡಿಸಿ, ಜಿಲ್ಲೆ, ವಿಭಾಗ, ರಾಜ್ಯ ಮತ್ತು ರಾಷ್ಟ್ರದ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಶಿಕ್ಷಕರು ಬಹಳ ಇದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಷ್ಟೂರನಲ್ಲಿ ಸುಮಾರು ಮೂರು ನಾಲ್ಕು ವರ್ಷದಿಂದ ಯೋಗಾದಲ್ಲಿ ರಾಜ್ಯಮಟ್ಟಕ್ಕೆ ಹೋಗುತ್ತಾರೆ. ಅವರು ಶ್ರೀಮತಿ ಶಿವಕಾಂತಮ್ಮಾ, ದೈಹಿಕ ಶಿಕ್ಷಕಿ ಹಾಗೆ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಲ್ಲಿಕಾರ್ಜುನ ಟಂಗಸಾಲೆ, ಶಿವಕುಮಾರ ಜೀಡಗೆ ಹಣಮಂತ ಕಾರಾಮುಂಗೆ, ಜೈಪಾಲರೆಡ್ಡಿ, ಚಕ್ರಸಾಲಿ ಎಂಬ ಒಳ್ಳೆಯ ದೈಹಿಕ ಶಿಕ್ಷಕರು ಇದ್ದಾರೆ. ನಮ್ಮ ಜಿಲ್ಲೆಯಿಂದ ಕ್ರೀಡಾ ಚಾರ್ಟಗಳು ಅನೇಕ ಜಿಲ್ಲೆಯಲ್ಲಿ ಉಪಯೋಗಿಸುತ್ತಿದ್ದಾರೆ. ಈ ಕೆಲಸ ಟಂಗಸಾಲೆ ಸರ್ ಮಾಡಿದ್ದು, ಹಾಡು, ಕವನ, ಲೇಖನ ಹೀಗೆ ಅನೇಕ ತರಹದ ಇನ್ನಿತರ ಚಟುವಟಿಕೆಯಲ್ಲಿ ಶ್ರೀಮತಿ ಸುನೀತಾ ಪಾಟೀಲ, ದೈಹಿಕ ಶಕ್ಷಕಿ ಮತ್ತು ಅವರ ಸಂಗಡಿಗರು ಸಹ ರಾಜ್ಯದಲ್ಲಿ ಹೆಸರು ಮಾಡಿದ ದೈಹಿಕ ಶಿಕ್ಷಕಿಯರು ಸಹ ಜಿಲ್ಲೆಯಲ್ಲಿ ಇದ್ದಾರೆ. ಒಟ್ಟಾರೆ ಶಿಕ್ಷಕ, ಪಾಲಕ, ಸರಕಾರ ಮತ್ತು ಸಮಾಜ ಇದರ ಬಗ್ಗೆ ಕಾಳಜಿ ವಹಿಸಿದರೆ ಒಂದೇ ವರ್ಷದಲ್ಲಿ ನಮ್ಮ ಜಿಲ್ಲೆಯ ಹೆಸರು ರಾಜ್ಯದಲ್ಲಿ ಮೇಲಿರುತ್ತದೆ ಎಂದು ಹೇಳಬಹುದು.